
Article · August 25, 2026
ಮೌನ ರಾಗ
By ಜಯಶ್ರೀ . ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ಸಂಧ್ಯಾ ಸಮಯದಲಿ ಸೂರ್ಯ ಸರಿಯುತಲಿಹನು
ಅಡಿಗಿ ಹೋಯಿತು ಮೆಲ್ಲ ಬಿಸಿಲ ಬೇಗೆ /
ತಣ್ಣನೆಯ ತಂಗಾಳಿ ಕೈಬೀಸಿ ಕರೆಯಿತು
ಸುತ್ತಾಡಿ ಬರಲೆಂದು ಹೊರಟೆ ಹಾಗೇ /
ನಾಲ್ಕು ಹನಿ ಮಳೆ ಸುರಿದು ತಣ್ಣಗಾಗಿದ್ದ ನೆಲ
ತಂಪಾಗಿ, ಹಿತವಾಗಿ ತಂಪುಗಾಳಿ /
ತರುಲತೆಗಳೆಲ್ಲವೂ ಮಾತನಾಡುತಲಿತ್ತು
ಕೇಳೋಣ ಸುಮ್ಮಗಿರಿ ಮೌನವಾಗಿ /
ಚಿಲಿಪಿಲಿಯ ಕಲರವವು ಇಂಪಾದ ಗಾಯನವು
ಒಂದೊಂದು ಹೆಜ್ಜೆಗೂ ಒಲವ ಗಾನ /
ಮಾತು ಹೊರಡಲೆ ಇಲ್ಲ ಮೌನ ರಾಗವು ಎಲ್ಲ
ತಲೆ ಎತ್ತಿ ನೋಡಿದೆನು ಚೆಲುವ ಬಾನ /
Creative Writings
