
News · August 13, 2025
ಕನ್ನಡ ಸಾಹಿತ್ಯ ಪರಿಷತ್ತು - ಕಾರ್ಕಳ ಘಟಕದಿಂದ ಕೃಷ್ಣ ಭಟ್ಟರಿಗೆ ಸನ್ಮಾನ
“ಹಿರಿಯರ ಕಡೆಗೆ ಸಾಹಿತ್ಯದ ನಡಿಗೆ” ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಶ್ರೀಯುತ ಕೃಷ್ಣ ಭಟ್ಟರನ್ನು ಅವರ ನಿವಾಸದಲ್ಲಿ ದಿನಾಂಕ 10-8-2025 ರಂದು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಆಯೋಜಿಸಿರುವ “ಹಿರಿಯರ ಕಡೆಗೆ ಸಾಹಿತ್ಯದ ನಡಿಗೆ” ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಶ್ರೀಯುತ ಕೃಷ್ಣ ಭಟ್ಟರನ್ನು ಅವರ ನಿವಾಸದಲ್ಲಿ ದಿನಾಂಕ 10-8-2025 ರಂದು ಜಿಲ್ಲಾ ವತಿಯಿಂದ ಸನ್ಮಾನಿಸಲಾಯಿತು.
ಉಪ್ಪಂಗಳ ಗುರುವಾಯುರಣ್ಣ ಎಂದೇ ಪರಿಚಿತರಾದ ಕೃಷ್ಣ ಭಟ್ಟರು ಕಾರ್ಕಳ ತಾಲೂಕು ತೆಳ್ಳಾರಿನ ನಿವಾಸಿ.
ತಂದೆ ಶ್ರೀ ಸುಬ್ರಹ್ಮಣ್ಯ ಭಟ್ ಮತ್ತು ತಾಯಿ ಶ್ರೀಮತಿ ಪದ್ಮಾವತಿ ಅಮ್ಮನವರ ಜ್ಯೇಷ್ಠ ಪುತ್ರನಾಗಿ 1941 ರಲ್ಲಿ ಕಾಸರಗೋಡಿನಲ್ಲಿ ಜನನ. 1966 ರಲ್ಲಿ ಕಾರ್ಕಳಕ್ಕೆ ಬಂದು ಅಡಿಕೆ ಹಾಗೂ ಭತ್ತದ ಕೃಷಿಯಲ್ಲಿ ಮಾಡಿದ ನವೀನ ಪ್ರಯೋಗಗಳಿಗೆ ,ಕೃಷಿ ಸಾಧನೆಗಳಿಗೆ ಸಿಂಡಿಕೇಟ್ ಬ್ಯಾಂಕ್ ವತಿಯಿಂದ “ಪ್ರಗತಿಪರ ಕೃಷಿಕ” ಪ್ರಶಸ್ತಿ ,ಆಕಾಶವಾಣಿ ಮಂಗಳೂರು ರೇಡಿಯೋದಲ್ಲಿ ಕೃಷಿ ಸಂದರ್ಶನ, ಹೀಗೆ ಹಲವಾರು ಪ್ರಶಸ್ತಿ ಸನ್ಮಾನಗಳಿಂದ ಗುರುತಿಸಿಕೊಂಡಿದ್ದಾರೆ.
ಊರಿನ ಪ್ರಗತಿಪರ ಕಾರ್ಯಗಳಲ್ಲಿ , ದೇವಸ್ಥಾನ ನವೀಕರಣ,ಶಾಲಾಭಿವೃದ್ಧಿ ಹೀಗೆ ವಿವಿಧ ಸಮಾಜ ಸ್ನೇಹಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪತ್ನಿ ಶ್ರೀಮತಿ ಪ್ರೇಮಲತರೊಂದಿಗೆ ತುಂಬು ಕುಟುಂಬದಲ್ಲಿ ಮೌಲ್ಯಯುತ ಜೀವನ ನಡೆಸುತ್ತಿರುವ ಕೃಷ್ಣ ಭಟ್ಟರು ಸಮಾಜದಲ್ಲಿ ಎಲ್ಲರಿಗೂ ಆದರ್ಶಪ್ರಾಯರು.


