Karada Vishwa

Article · September 5, 2026

ಸಾರ್ಥಕ..

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಬದುಕು ಸುಂದರ ಭಾವ ಬಂಧುರ
ನಡೆಸಿ ಸಾರ್ಥಕ ಜೀವನ /
ಪ್ರೀತಿ ಮಮತೆಯ ನೆರಳು ದೊರೆಯಲು,
ಜೀವನವು ಬಲು ಪಾವನ /

ಬದುಕು ಸುಂದರ ಭಾವ ಬಂಧುರ
ದೇಹ ಆತ್ಮನ ಮಂದಿರ /
ಆತ್ಮ ದೇಹವ ತೊರೆಯೊವರೆಗಿದು
ತೊರೆಯೆ ದೇಹ ಹರೋಹರ/

ಬದುಕು ಸುಂದರ ಭಾವಬಂಧುರ
ದೇಹ ಎಲುಬಿನ ಹಂದರ /
ಪಂಚಭೂತಗಳಲ್ಲಿ ಸೇರುವ

-ವರೆಗೆ ಇಹುದಿದು ಸುಂದರ /

Creative Writings