
News · April 24, 2026
'ಅವತರಣ 2026' ಕ್ರೀಡಾಕೂಟದ ವಿಜೇತರ ಪಟ್ಟಿ
ಸಹೃದಯಿ ಕರಾಡ ಬಾಂಧವರಿಗೆ ವಂದನೆಗಳು,
ಯೂತ್ ಕರಾಡ ಮಂಗಳೂರು ಆಯೋಜಿಸಿದ 'ಅವತರಣ 2026' ಕ್ರೀಡಾಕೂಟವು ಕೇವಲ ಗೆಲುವು-ಸೋಲುಗಳ ವೇದಿಕೆಯಾಗಿರದೆ, ನಮ್ಮವರನ್ನೆಲ್ಲಾ ಒಂದೇ ಮೈದಾನದಲ್ಲಿ ಒಗ್ಗೂಡಿಸಿದ ಹಬ್ಬವಾಗಿತ್ತು. ಅಂದು ಮೈದಾನದಲ್ಲಿ ಮಿಂಚಿದ ಪ್ರತಿಯೊಬ್ಬ ಕ್ರೀಡಾಪಟುವೂ ನಮ್ಮ ಸಮುದಾಯದ ಹೆಮ್ಮೆ.
ಆಟದಲ್ಲಿ ಭಾಗವಹಿಸಿದವರು ಮೈದಾನದ ಆ ಅಚ್ಚಳಿಯದ ನೆನಪುಗಳಲ್ಲಿದ್ದರೆ, ಅನಿವಾರ್ಯ ಕಾರಣದಿಂದ ಬರಲಾಗದವರು ಈ ಸಾಧಕರ ಪಟ್ಟಿಯನ್ನು ನೋಡಿ ಹೆಮ್ಮೆ ಪಡುತ್ತಾರೆ ಎಂಬ ನಂಬಿಕೆ ನಮ್ಮದು. ಈ ಸಾಧನೆ ಮುಂದಿನ ಬಾರಿ ನೀವೂ ಕ್ರೀಡಾಂಗಣಕ್ಕೆ ಇಳಿಯಲು ಸ್ಫೂರ್ತಿಯಾಗಲಿ.
ನಮ್ಮ ಕ್ರೀಡಾ ತಾರೆಗಳ ವಿಜೇತ ಪಟ್ಟಿ ಇಲ್ಲಿದೆ


Sports
