
Article · November 10, 2026
ದೀಪಜ್ಯೋತಿ.
By ಶ್ರೀದೇವಿ ಕಜಮಲೆ.
ಶ್ರೀದೇವಿ ಭಟ್
ದೀಪದ ಬೆಳಕಿನ ಮಹಿಮೆಯನ್ನ ಸಾರುವ ಹಾಗೂ ಅಂತರಂಗವನ್ನ ಅರಿಯುವ ಭಾವನೆ.
ಜಗದ ಕಾರ್ಗತ್ತಲೆಯ ಕಳೆದೋಡಿಸಲಿ ಹಣತೆ
ಉರಿದುರಿದು ಪಸರಿಸಲಿ ದೀಪ ಜ್ಯೋತಿಯಿಂದ.
ಸ್ವಾರ್ಥ ಅಹಂ ಭಾವಗಳ ಅಂಧಕಾರವು ಕಳೆದು
ಹೃದಯ ಬೆಳಗಲಿ ದಿವ್ಯ ಕಾಂತಿಯಿಂದ.
ಹೃದಯದೊಳಗಿನ ದೀಪ ನಿರತ ಉರಿಯುತಲಿರಲಿ
ಪ್ರೀತಿ ಸ್ನೇಹದ ಸುಮವು ಅರಳುತಿರಲಿ.
ತಾಯಿ ಭಾರತಿಯೊಡಲ ಮಕ್ಕಳೆನ್ನುವ ಭಾವ
ನಮ್ಮ ಮನೆಮನಗಳನು ಬೆಳಗುತಿರಲಿ .
ಭಾವಬಂಧವ ಬೆಸೆವ ದಿವ್ಯ ಸಂಸ್ಕೃತಿ ನಮದು
ಜಗಕೆ ಮಾದರಿ ಎನುವ ಹಬ್ಬವಾಗಿ.
ಸಾಮರಸ್ಯದ ಬದುಕು ದೀಪ ಬೆಳಗುವ ತೆರದಿ
ಅನವರತ ಉರಿಸೋಣ ಜಗದ ಬೆಳಕಾಗಿ.
Creative Writings
