Karada Vishwa

Article · November 7, 2026

ಕರ್ಮ

By ಶ್ರೀವಿದ್ಯಾ ಎಸ್ ಗೋಖಲೆ

ಶ್ರೀವಿದ್ಯಾ ಎಸ್ ಗೋಖಲೆ

ಆತ ಕುಳಿತು ಉಣ್ಣುತ್ತಿದ್ದ..
ತನ್ನ ಪಾಲಿನದ್ದು ಇರಬಹುದೇ?
ಅಥವಾ ಬೇರೆಯವರ ಬುತ್ತಿಯದ್ದೇ??

ನಿನ್ನೆ ಮೊನ್ನೆ ಮಾಡಿದ್ದು ಇರಬಹುದೇ?
ಇನ್ಯಾವತ್ತೋ ಮಾಡಿದ್ದು ಆಗಿರಬಹುದೇ?
ಖುಷಿಯಾಗಿ ತಿನ್ನುತ್ತಿರುವನೆ?
ಗಂಟಲಿನಿಂದ ಇಳಿಯದೇ ಇರಬಹುದು ಅಲ್ಲವೇ..?.

ಮಾಡಿದ್ದು ತಿನ್ನಲೇಬೇಕು ಎಂದು ತಿನ್ನುತ್ತಿರುವನೆ?
ಯಾರದೋ ಒತ್ತಾಯಕ್ಕೆ ಮಾಡಿದ್ದು ಇಂದು ತಿನ್ನುತ್ತಿರಲೂ ಬಹುದಲ್ಲವೇ?
ತಿನ್ನುವಾಗ ಮುಖದ ಮೇಲೆ ಮೂಡಿದ್ದು ಪಶ್ಚಾತಾಪದ ನೆರಳೇ?
ಅಥವಾ ತಿನ್ನದೇ ವಿಧಿಯಿಲ್ಲ ಎನ್ನುವ ಭಾವವೇ..?

ಆತ ಕುಳಿತು ಉಣ್ಣುತ್ತಿದ್ದ..
ಕಣ್ಣ ಕಡೆಯಲ್ಲೊಂದು ಅಸ್ಪಷ್ಟ ನೀರಿನ ಗುರುತು..
ಮಾಡಿದ ಪಾಪಗಳ ಖಾರ ಶಾಖ ತಗುಲಿ…!



Creative Writings