
Article · August 22, 2026
ಅರ್ಪಣೆ.
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ದೇವರನು ನೆನೆಯುತ್ತ.
ಪದುಮನಾಭನ ಪಾದ ಕಮಲಗಳ ವಂದಿಸುತ
ಪರಿಪರಿಯ ವಸ್ತುಗಳ
ಅರ್ಪಿಸೋಣ/
ಜಗದೊಳಗೆ ಮೃದುವಾದಚೆಲುವ ಹೂವುಗಳನ್ನು
ತಂದು ಪದ ಕಮಲಕ್ಕೆ ಒಪ್ಪಿಸೋಣ /
ಭವದ ಸಾಗರವನ್ನು ದಾಟಿಸುವ ಅಂಬಿಗನು
ಅವನೇ ಎಂಬುದನೆಂದು ನೆನೆಯಬೇಕು /
ವಿಧ ವಿಧದ ಆಸೆ ಆಮಿಷಗಳನು ಬದಿಗೊತ್ತಿ
ಅವನ ನಾಮಸ್ಮರಣೆ ಮಾಡಬೇಕು/
ನಶ್ವರದ ಈ ಜಗದಿ ಬಾಳುವೆಯನಿತ್ತಿಹನು
ಅವಧಿ ಮುಗಿಯುವವರೆಗೆ ಬಾಳಬೇಕು /
ಅವನು ಕರೆದಾ ಕ್ಷಣಕೆ ಎಲ್ಲವನು ಬದಿಗೊತ್ತಿ
ಅವನಿದ್ದ ಕಡೆಗೆದ್ದು ಓಡಬೇಕು/
Creative Writings
