
Article · January 13, 2026
"ಪ್ರೀತಿ"
✍️ ಶೈಲಜ ಭಟ್
ಮುಗುಳು ನಗುವ ಮನಸ್ಸನ್ನು
ಕಂಡ ಹೃದಯವು
ಪ್ರೀತಿಯ ಕೋಟೆ ಕಟ್ಟಿತ್ತು...
ಮನಸ್ಸಿನ ಅರಿಯದ ಭಾವನೆಗಳಿಗೆ
ಹೃದಯದ ವೇಗವು ಹೆಚ್ಚಿತ್ತು..
ಮನಸ್ಸು ಕಟ್ಟಿತ್ತು ಪ್ರೀತಿಯ
ಬಣ್ಣ ಬಣ್ಣದ ತೋರಣ...
ಹೃದಯ - ಮನಸ್ಸಿನ
ಪಿಸುಮಾತುಗಳೇ
ಇದಕ್ಕೆಲ್ಲಾ ಕಾರಣ..
ತಿಳಿಯಾದ ಮನದಂಗಳದಿ
ಕಾಮನಬಿಲ್ಲೊಂದು ಮೂಡಿತ್ತು..
ಹೃದಯವು ಹಿಡಿದ
'ಪ್ರೀತಿ'ಯ ಕುಂಚದಿಂದ
ಅದರಲ್ಲಿ ಬಣ್ಣವ ತುಂಬಿತ್ತು..
ಪ್ರೀತಿ - ಅನುರಾಗವು
ಹೊಮ್ಮಿರಲು ಕಣ್ಣಲ್ಲಿ..
ಕಳೆದು ಹೋದ ಮನಸ್ಸನ್ನು
ಹೃದಯವು ಬಚ್ಚಿಟ್ಟಿತ್ತು
ತನ್ನ ಜೊತೆಯಲ್ಲಿ...
ಪ್ರೀತಿಯ ಹೂವೊಂದು
ಘಮಘಮಿಸುತ
ಅರಳಿತ್ತು ಮನದಲ್ಲಿ...
ಹೃದಯಕ್ಕೆ ಚುಚ್ಚಿದ
ಮುಳ್ಳೊಂದು ನೀರನ್ನು
ತರಿಸಿತ್ತು ಕಣ್ಣಲ್ಲಿ...
Creative Writings
