Karada Vishwa

News · April 21, 2026

ಅಭಿನಂದನಾ ಸಂದೇಶ

⁃ ಕರಾಡ ವಿಶ್ವ ತಂಡದ ಪರವಾಗಿ

ಕರಾಡ ಬ್ರಾಹ್ಮಣ ಸಮಾಜ ಬಂಧುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು!

ಮಂಗಳೂರಿನಲ್ಲಿ ನಡೆದ ಅವತರಣ- 2026 ಕ್ರೀಡಾಕೂಟವು ಅತ್ಯಂತ ಸುಸಂಘಟಿತವಾಗಿದ್ದು, ಎಲ್ಲ ಕರಾಡ ಘಟಕಗಳಿಂದ ಉತ್ಸಾಹಭರಿತ ಭಾಗವಹಿಸುವಿಕೆ ಕಂಡುಬಂದಿತು. ಯುವಕರ ಚುರುಕುತನ ಮತ್ತು ಸಮರ್ಪಣೆ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ — ನಿಮ್ಮೆಲ್ಲರಿಗೂ ವಿಶೇಷ ಅಭಿನಂದನೆಗಳು.

ಈ ಕ್ರೀಡಾಕೂಟವು ಕೇವಲ ಕ್ರೀಡೆಗೆ ಸೀಮಿತವಾಗಿರದೆ, ಕರಾಡ ಸಮುದಾಯದಲ್ಲಿ ಸಂಪರ್ಕ ಸೌಹಾರ್ದತೆ, ಮೈತ್ರಿ, ಸಹಕಾರ ಮತ್ತು ಉಪಕಾರಭಾವವನ್ನು ಹೆಚ್ಚಿಸುವ ಮಹತ್ವದ ವೇದಿಕೆಯಾಗಿ ಪರಿಣಮಿಸಿದೆ. ಸಮಾಜ ಸೇವೆಯ ಸಾರ್ಥಕತೆ ಇಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ.
   
ಇಂತಹ ಕಾರ್ಯಕ್ರಮಗಳು ಸಮುದಾಯದಲ್ಲಿ ಐಕ್ಯತೆ ಹೆಚ್ಚಿಸಿ ಸಶಕ್ತ ಸಮಾಜವಾಗಲು ಸಹಕಾರಿ. ಮುಂದೆಯೂ ಇಂತಹ ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂಬ ಹಾರೈಕೆ.

ಆಯೋಜಕರಿಗೆ ಹೃತ್ಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿದವರಿಗೂ ಸಹಕರಿಸಿದವರಿಗೂ ಅಭಿನಂದನೆಗಳು.


ಕರಾಡ ವಿಶ್ವ App ನಮ್ಮೆಲ್ಲರದ್ದು ..

App ಬಳಸಿ ,  ಸಮಾಜ ಬೆಳೆಸಿ ..

" ಸಂಪರ್ಕ - ಸಹಕಾರ - ಸಮೃದ್ಧಿ "


Sports
ಅಭಿನಂದನಾ ಸಂದೇಶ