Karada Vishwa

Event · July 8, 2026

ಕರಾಡ ವಿಶ್ವ ವೆಬಿನಾರ್ ಸರಣಿ -39

ದಿನಾಂಕ : 11/07/2026ರ ಶನಿವಾರ ಸಂಜೆ 7.30. ವಿಷಯ : ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಪಾತ್ರ ಸಂಪನ್ಮೂಲ ವ್ಯಕ್ತಿ : ಶ್ರೀಮತಿ ಪ್ರತಿಭಾ ಸತೀಶ್ ದೇವ್

ಈ ಸರಣಿ ಕಾರ್ಯಕ್ರಮದ ಅಂಗವಾಗಿ 11/07/2026ರ ಶನಿವಾರ ಸಂಜೆ 7.30ಕ್ಕೆ ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಪಾತ್ರ ಎನ್ನುವ ವಿಷಯದ ಕುರಿತು ಶ್ರೀಮತಿ ಪ್ರತಿಭಾ ಸತೀಶ್ ದೇವ್ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.

ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.

ಗೂಗಲ್ ಲಿಂಕ್:https://meet.google.com/ykz-gpuu-tfj


ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:

★ ಸಾಲ್ಕಣಿಯ ಮಣದೂರು ಗ್ರಾಮದ ಶ್ರೀ ಮಹಾಬಲೇಶ್ವರ ಹೆಗಡೆ - ಶ್ರೀಮತಿ ಲಲಿತಾ ದಂಪತಿಗಳ ಕಿರಿಯ ಮಗಳಾಗಿ 1971ರಲ್ಲಿ ಜನನ.

★ ಊರಿನ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸ. ಯಡಳ್ಳಿ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಶಿರಸಿಯ ಎಂಇಎಸ್ ಆರ್ಟ್ಸ್ ಕಲಾ ಮತ್ತು ವಿಜ್ಞಾನ ಕಾಲೇಜ್‌ನಲ್ಲಿ ಬಿಎ ಇಂಗ್ಲೀಷ್ ಮೇಜರ್ ಪದವಿ.

★ ಬೆಂಗಳೂರಿನ ಸನಾತನ ವೇದ ಪಾಠಶಾಲೆಯ ಹಳೆಯ ವಿದ್ಯಾರ್ಥಿ.

★ ನಿತ್ಯಪೂಜಾ ಮಂತ್ರಗಳಿಂದ ಹಿಡಿದು, ರುದ್ರ ಚಮಕ ಸೂಕ್ತ ಇನ್ನಿತರ ಮಂತ್ರಗಳನ್ನು ಆನ್‌ಲೈನ್ ಮೂಲಕ

ಅಧ್ಯಯನ ಮಾಡಿದರು.

★ ಕೃಷಿ, ಹೈನುಗಾರಿಕೆಯ ಜೊತೆಗೆ ಬಿಡುವಿನ ವೇಳೆಯಲ್ಲಿ 'ತಾನು ಕಲಿತದ್ದನ್ನು ಬೇರೆಯವರಿಗೆ ಕಲಿಸಬೇಕು' ಎಂಬ ಉದಾತ್ತ ಮನೋಭಾವದೊಂದಿಗೆ ಊರಿನ ಸ್ವಸಹಾಯ ಸಂಘದ ನೆರವಿನಿಂದ ಅನೇಕ ಸ್ಥಳೀಯರನ್ನು ಸೇರಿಸಿಕೊಂಡು 2018ರಲ್ಲಿ ಭಗವದ್ಗೀತೆಯ ಪಾಠವನ್ನು ಊರ ಶಾಲೆಯಲ್ಲಿ ಆರಂಭಿಸಿದರು.

★ 'ಪ್ರೇರಣಾ' ಎಂಬ ಆನ್‌ಲೈನ್ ತರಗತಿಯ ಮೂಲಕ ನಿತ್ಯ ಶ್ಲೋಕಗಳು, ಭಗವದ್ಗೀತಾ ಅರ್ಥ ಸಹಿತ ಪಠಣ, ಭಜನೆ, ದೇವರ ನಾಮ ಇತ್ಯಾದಿಯನ್ನು ಆಸಕ್ತರಿಗೆ ಕಲಿಸುತ್ತಿದ್ದಾರೆ.

★ ಗೃಹೋದ್ಯಮದ ಮೂಲಕ ತಿಂಡಿ-ತಿನಿಸುಗಳ ಮಾರಾಟವೂ ಇದೆ. 'ಪ್ರೇರಣಾ' ಎಂಬ ಬ್ರಾಂಡ್ ಮೂಲಕ ಮಾರುಕಟ್ಟೆಗೆ ಶೀಘ್ರ ಹೆಜ್ಜೆಯಿಡಲಿದ್ದಾರೆ.

★ ರಾಜ್ಯ-ರಾಷ್ಟ್ರ ಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಹೆಮ್ಮೆ - ಇಸ್ಕಾನ್ ನಡೆಸಿದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ವೇದವ್ಯಾಸ ಯೋಗ ಪ್ರತಿಷ್ಠಾನ

ನಡೆಸಿದ ಸ್ಪರ್ಧೆಯಲ್ಲಿ ವಿಶೇಷ ಸ್ಥಾನ ಗಳಿಸಿದ ಹೆಗ್ಗಳಿಕೆ.

★ ಕದಂಬ ಸೌಹಾರ್ದ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು.

★ ಪ್ರದೇಶ ಕರಾಡ ಬ್ರಾಹ್ಮಣ ಸಂಘದ ಈಗಿನ ಉಪಾಧ್ಯಕ್ಷೆ.

★ ಹವ್ಯಾಸಿ ಯುಟ್ಯೂಬರ್! ಇವರ ಹಾಡುಗಳನ್ನು ಅಲ್ಲಿ ವೀಕ್ಷಿಸಬಹುದು.

Webinar