Karada Vishwa

News · August 8, 2026

ಕರಾಡ ಸಮಾಜದ ಸೇವಾ ಸಂಸ್ಥೆಗಳ ಮಾಹಿತಿ ಕೋರಿಕೆ

- ಸಂಪಾದಕ ಮಂಡಳಿ, ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ.) ಅಗಲ್ಪಾಡಿ.

ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ.), ಅಗಲ್ಪಾಡಿ ಇದರ ಸುವರ್ಣ ಸಂಭ್ರಮದ ಅಂಗವಾಗಿ ವಿಶಿಷ್ಟ ಹಾಗೂ ಸಂಗ್ರಹಯೋಗ್ಯ ಸ್ಮರಣ ಸಂಚಿಕೆಯನ್ನು ಹೊರತರಲು ಸಿದ್ಧತೆ ನಡೆಸಿದೆ. ಕರಾಡ ಸಮಾಜದ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ದಾಖಲಿಸುವ ಉದ್ದೇಶದಿಂದ ಸ್ಮರಣ ಸಂಚಿಕೆಯಲ್ಲಿ ಕರಾಡರ ಸಮಾಜ ಸೇವಾ ಸಂಘಟನೆಗಳು ಎಂಬ ವಿಶೇಷ ಲೇಖನ ಪ್ರಕಟಿಸಲಾಗುತ್ತಿದೆ.

ಈ ಉದ್ದೇಶದಿಂದ ಕರಾಡ ಸಮಾಜದ ಬಂಧುಗಳು ಸ್ಥಾಪಿಸಿರುವ ಅಥವಾ ಕರಾಡ ಸದಸ್ಯರ ನೇತೃತ್ವ/ಸಕ್ರಿಯ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಸಂಘ-ಸಂಸ್ಥೆಗಳು (ಕರಾಡ ಬ್ರಾಹ್ಮಣ ಸಮಾಜದ ಅಂಗ ಸಂಸ್ಥೆಗಳ ಹೊರತಾಗಿ ಇರುವ ಸಂಸ್ಥೆಗಳು) ಟ್ರಸ್ಟ್‌ಗಳು, ಚಾರಿಟಬಲ್ ಸಂಸ್ಥೆಗಳು, ಹಿರಿಯರ ಸೇವಾ ಕೇಂದ್ರಗಳು, ಕ್ರೀಡೆ-ಶಿಕ್ಷಣ, ಮಹಿಳಾ ಸಶಕ್ತೀಕರಣ , ಮಕ್ಕಳ ಬೌದ್ಧಿಕ - ಸಾಂಸ್ಕೃತಿಕ ಚಟುವಟಿಕೆ, ಆರೋಗ್ಯ, ಆರ್ಥಿಕವಾಗಿ ಸಶಕ್ತರನ್ನಾಗಿಸುವ ಸೇವಾ ಸಂಸ್ಥೆಗಳು ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ನಮ್ಮ ಸಂಸ್ಥೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.

ಇಂತಹ ಸಂಸ್ಥೆಗಳ ಕುರಿತು ಮಾಹಿತಿ ಹೊಂದಿರುವ ಕರಾಡ ಬಂಧುಗಳು/ಪದಾಧಿಕಾರಿಗಳು ಸಂಸ್ಥೆಯ ಹೆಸರು, ಸ್ಥಾಪನೆಯ ವರ್ಷ, ಸ್ಥಾಪಕರು/ಪ್ರಮುಖ ಪದಾಧಿಕಾರಿಗಳು, ಉದ್ದೇಶಗಳು, ಈ ತನಕದ ಪ್ರಮುಖ ಸೇವಾ ಚಟುವಟಿಕೆಗಳು, ಸಾಧನೆಗಳು ಹಾಗೂ ಸಂಪರ್ಕ ವಿವರಗಳೊಂದಿಗೆ, ಲಭ್ಯವಿದ್ದಲ್ಲಿ ಸಂಬಂಧಿತ ಛಾಯಾಚಿತ್ರಗಳನ್ನೂ ಕಳುಹಿಸುವಂತೆ ವಿನಂತಿಸಲಾಗಿದೆ.

ದಿನಾಂಕ 15 ಆಗಸ್ಟ್ 2026 , ಇದರ ಮೊದಲು ಮಾಹಿತಿ ಸಲ್ಲಿಸಲು ಕೋರಲಾಗಿದೆ.

ಸಂಪರ್ಕ- ಮಾಹಿತಿಯನ್ನು ಪ್ರಮೋದ ಶ್ರೀಕಾಂತ ದೈತೋಟ ಇವರಿಗೆ (ಮೊ:9900975290) ಕಳುಹಿಸಲು ಕೋರಲಾಗಿದೆ.

ಕರಾಡ ಸಮಾಜದ ಸಮಾಜಸೇವಾ ಪರಂಪರೆಯನ್ನು ದಾಖಲಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಈ ಮಹತ್ವದ ಪ್ರಯತ್ನಕ್ಕೆ ಎಲ್ಲ ಕರಾಡ ಬಂಧುಗಳ ಸಹಕಾರವನ್ನು ಕೋರುತ್ತೇವೆ.

Community
ಕರಾಡ ಸಮಾಜದ ಸೇವಾ ಸಂಸ್ಥೆಗಳ ಮಾಹಿತಿ ಕೋರಿಕೆ