
Event · September 9, 2025
ಕರಾಡ ವಿಶ್ವ ವೆಬಿನಾರ್ ಸರಣಿ -29
13/09/2025ರ ಶನಿವಾರ ಸಂಜೆ 7.30ಕ್ಕೆ Google Meet ವೇದಿಕೆಯಲ್ಲಿ ; ಸಂಪನ್ಮೂಲ ವ್ಯಕ್ತಿ : ಡಾ. ಕೊಳ್ಚಪ್ಪೆ ಗೋವಿಂದ ಭಟ್; ವಿಷಯ : ಸಂತೋಷದಿಂದ ಇರುವುದು ಹೇಗೆ?
ಈ ಸರಣಿ ಕಾರ್ಯಕ್ರಮದ ಅಂಗವಾಗಿ 13/09/2025ರ ಶನಿವಾರ ಸಂಜೆ 7.30ಕ್ಕೆ ಸಂತೋಷದಿಂದ ಇರುವುದು ಹೇಗೆ? ಎನ್ನುವ 'ವಿಶಿಷ್ಟ ವಿಷಯ'ದ ಕುರಿತು ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.
ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.
ಗೂಗಲ್ ಲಿಂಕ್: https://meet.google.com/jwo-yvyb-etc
ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
* ದಿ. ಕೆ ವೆಂಕಟರಮಣ ಭಟ್ – ದಿ. ರುಕ್ಮಿಣಿ ಅಮ್ಮ ದಂಪತಿಯ ಪುತ್ರ.
* ಪ್ರಾಥಮಿಕ & ಪ್ರೌಢಶಾಲಾ ವಿದ್ಯಾಭ್ಯಾಸ ಬೋವಿಕಾನ, ಎಡನೀರು & ಕಾಸರಗೋಡು.
* ಉನ್ನತ ಶಿಕ್ಷಣ ಕಾರ್ಕಳ & ಮೈಸೂರು.
* ಎಂಎ (ಅರ್ಥಶಾಸ್ತ್ರ), ಎಂಎಸ್ಸಿ (ಸಸ್ಯಶಾಸ್ತ್ರ), ಎಂಎ (ಕನ್ನಡ), ಎಂಬಿಎ, CAIIB, LL.B, Ph.D ಪದವೀಧರರು.
* ಕಾರ್ಪೊರೇಷನ್ ಬ್ಯಾಂಕಿನಲ್ಲಿ 36 ವರ್ಷಗಳ ಸುದೀರ್ಘ ಸೇವೆ.
* ನಿವೃತ್ತಿಯ ಬಳಿಕ 7 ವರ್ಷ ಬ್ಯಾಂಕ್ ಉದ್ಯೋಗಿಗಳ ನೇಮಕಾತಿ & ತರಬೇತಿ ಸಂಸ್ಥೆಯಲ್ಲಿ (ಮುಂಬೈ & ಕೊಯಂಬತ್ತೂರು) ಉದ್ಯೋಗ.
* ಪ್ರಸ್ತುತ ಪೂರ್ಣಕಾಲಿಕ ಸಾಹಿತ್ಯ ಪರಿಚಾರಕರು.
* ಸಾಧನೆಗಳು: ಕನ್ನಡದಲ್ಲಿ 3 ಕಥಾ ಸಂಕಲನ ಒಂದು ಕವನ ಸಂಕಲನ ಮತ್ತು 3 ಇತರ ಪುಸ್ತಕಗಳು ಪ್ರಕಟಿತ. ಇಂಗ್ಲಿಷ್ ನಲ್ಲಿ 7 ಪಠ್ಯಪುಸ್ತಕಗಳು ಬಿಕಾಂ ವಿದ್ಯಾರ್ಥಿಗಳಿಗಾಗಿ ಪ್ರಕಟಿತ. ಅರ್ಥಶಾಸ್ತ್ರ ಮತ್ತು ಬ್ಯಾಂಕಿಂಗ್'ನಲ್ಲಿ ಸುಮಾರು 150 ಲೇಖನಗಳು ಪ್ರಕಟಿತ.
* ಪ್ರಶಸ್ತಿಗಳು: ನೆಲಸಂಪಿಗೆ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಪುರಸ್ಕಾರ, ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬೈ ಇವರಿಂದ ಕೃಷಿ ಬಂಧು ಪುರಸ್ಕಾರ, ಹೊಂಬೆಳಕು ಸಾಂಸ್ಕೃತಿಕ ಸಂಘ ಬೆಳಗಾವಿ ರಾಷ್ಟ್ರಕೂಟ ಪ್ರಶಸ್ತಿ 2020, ಡೈಲಿ ನ್ಯೂಸ್ 2024ರ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ, ಗಣಕ ರಂಗ ಧಾರವಾಡ ಪ್ರಬಂಧ ಸ್ಪರ್ಧೆಯಲ್ಲಿ ಮೊದಲ ಬಹುಮಾನ.
* ನಗುಮುಖ, ಸದಾ ಸಮಾಜ ಸೇವಾಕಾಂಕ್ಷಿ - ಪ್ರಸ್ತುತ ಮಂಗಳೂರು ವಾಸಿ.
* ಸಂಪರ್ಕ ಸಂಖ್ಯೆ: 7045353049
