Karada Vishwa

Article · June 25, 2026

ಹೇಗಿರಬೇಕೆಂದರೆ ಅವನು..

(ಹಾಸ್ಯಗವನ ) - ಶ್ರದ್ಧಾ ಭಟ್

ನನ್ನ ಸಹಪಾಠಿಗೆ ಒಮ್ಮೆ ಹೇಳಿದೆ ನಾನು,

ಹೇಗಿರಬೇಕೆಂದರೆ ಅವನು,

ಹೂವಿನೊಳಗಿರುವ ಸುಗಂಧದಂತೆ,

ಕೊಳಲಿನಿಂದ ಹೊರಸೂಸುವ ಉಸಿರಿನಂತೆ,

ಸಂಗೀತದ ಸ್ವರಗಳಂತೆ,

ಗುಪ್ತಗಾಮಿನಿಯಂತೆ,

ಮುಗುಳುನಗೆಯಂತೆ ಅಹಂಕಾರ ರಹಿತನಾಗಿ...

ಸೂರ್ಯನ ಕಿರಣಗಳಂತೆ,

ಅರ್ಜುನನ ಶರದಂತೆ,

ಭೀಮನ ಬಲದಂತೆ,

ಯುದ್ಧಷ್ಟಿರನ ಧರ್ಮದಂತೆ,

ನಕುಲ-ಸಹದೇವರ ಸಮಯಪ್ರಜ್ಞೆಯಂತೆ,

ನನ್ನಂತೆ....

ನಿನ್ನಂತೆ.....

ಆಗವಳು ಹೇಳಿದಳು...

ಸಾಕಮ್ಮ ನಿನ್ನ ಅಂತೆ ಕಂತೆ,

ನಾಳೆ ಪರೀಕ್ಷೆ ಇದೆಯಂತೆ,

ಗುರುಗಳು ಹೇಳಿದ್ದಾರೆ...

ವಿಷಯದಲ್ಲಿ ಒಳ್ಳೆ ಅಂಕಗಳು ಬರಬೇಕಂತೆ

Creative Writings