Karada Vishwa

Article · November 14, 2026

ಸಾಧನೆ.

By ಶ್ರೀದೇವಿ ಕಜಮಲೆ.

ಶ್ರೀದೇವಿ ಕಜಮಲೆ.

ಹೆಜ್ಜೆಗಳ ಮುಂದಿಟ್ಟು ನಡೆದೆ ಹಾದಿಯಲ್ಲಿ
ಏನೋ ಗುರಿ ಸೇರಬೇಕೆಂಬ
ಆಶಾ ಭಾವದಲ್ಲಿ.

ಹೆಜ್ಜೆಯನ್ನ ಮುಂದಿಡಲು
ಕಲ್ಲುಮುಳ್ಳುಗಳು ಗಿಡಗಂಟೆಗಳು.
ಮುಂದಡಿಯಿಡಲು ನಿಧಾನವಾಗಿ ಹೆಜ್ಜೆ ಇಟ್ಟಾಗ

ಇನ್ನೇನೋ ಯೋಚನೆಗಳು.
ಸುತ್ತು ಕತ್ತಲು ಕವಿದಂತೆ ಭಾಸ.
ಆಗಸದತ್ತ ದೃಷ್ಟಿ ಹಾಯಿಸಲು
ಬೆಳಕೊಂದು ಮಿಂಚಿದಂತೆ.
ನಿಧಾನವಾಗಿ ಮುನ್ನಡೆಯಲು ಬೆಳಕು
ಜತೆಯಾಗಿ ಗುರಿ ಸೇರಿದಂತೆ.

Creative Writings