
Article · November 8, 2026
ಜಗದೋಧ್ಧಾರಕ ಶ್ರೀಕೃಷ್ಣ
By ಶ್ರೀದೇವಿ ಕಜಮಲೆ
ಶ್ರೀದೇವಿ ಭಟ್
ದುಷ್ಟರನ್ನು ನಾಶಮಾಡಿ ಜಗಕೆ ಶಾಂತಿಯನ್ನು ಕೊಡುವ ಭಗವಂತ.
ಅಟ್ಟಹಾಸದಿ ಮೆರೆದನಂದು ನರಕಾಸುರನು
ಅಟ್ಟಿ ಹೊಡೆದನು ಕೃಷ್ಣ ದಿಟ್ಟತನದಿಂದ .
ಮೆಟ್ಟಿ ಸದೆಬಡಿಯುತಲಿ ದುಷ್ಟ ದುರುಳನ ಸೊಕ್ಕು
ಮಟ್ಟ ಹಾಕಿದನವನ ಗಟ್ಟಿತನದಿಂದ .
ಪಟ್ಟು ಹಿಡಿದನು ಕೃಷ್ಣ ಜಗಕೆ ಶಾಂತಿಯ ಬಯಸಿ
ಹುಟ್ಟು ಅಡಗಿಸಲೆಂದು ಜನಿಸಿ ಬಂದ.
ಇಟ್ಟು ಹೊಡೆಯಲು ದೇವ ಬಿಟ್ಟ ಬಾಣದ ಚೂಪು
ಸುಟ್ಟು ಹೋಗಲು ಅಸುರ ಜಗಕೆ ಆನಂದ.
Creative Writings
