
News · August 26, 2025
ವಿವಿಧೆಡೆಗಳಲ್ಲಿ ನಡೆದ ಸಾಮೂಹಿಕ ಗೌರೀ ಪೂಜೆ
ಕರಾಡ ಬ್ರಾಹ್ಮಣ ಸಮಾಜದ ಸ್ಥಳೀಯ ಸಮಿತಿಗಳ ಆಶ್ರಯದಲ್ಲಿ, ವಿವಿಧೆಡೆಗಳಲ್ಲಿ ಇಂದು ಸಾಮೂಹಿಕ ಗೌರೀ ಪೂಜೆ ಭಕ್ತಿಪೂರ್ಣವಾಗಿ ನೆರವೇರಿತು.
ಕರಾಡ ಬ್ರಾಹ್ಮಣ ಸಮಾಜದ ಸ್ಥಳೀಯ ಸಮಿತಿಗಳ ಆಶ್ರಯದಲ್ಲಿ, ವಿವಿಧೆಡೆಗಳಲ್ಲಿ ಇಂದು ಸಾಮೂಹಿಕ ಗೌರೀ ಪೂಜೆ ಭಕ್ತಿಪೂರ್ಣವಾಗಿ ನೆರವೇರಿತು. ಅನೇಕ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಪೂಜೆಯನ್ನು ನೆರವೇರಿಸಿ ಧನ್ಯತಾ ಭಾವವನ್ನು ಹೊಂದಿದರು.
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ...
ಶ್ರೀ ಕ್ಷೇತ್ರದಲ್ಲಿ ತಾರೀಕು 26.08.2025ನೇ ಮಂಗಳವಾರ ಕ್ಷೇತ್ರದ ತಂತ್ರಿವರ್ಯರಾದ ಶ್ರೀ ಶಂಕರನಾರಾಯಣ ಶರ್ಮ, ಗೋಸಾಡ ಅವರ ನೇತೃತ್ವದಲ್ಲಿ ಗೌರೀ ಪೂಜೆಯನ್ನು ಆಯೋಜಿಸಲಾಯಿತು. ಇಂದು ಪ್ರಾಥ:ಕಾಲ ಶ್ರೀ ಗೌರಿಯನ್ನು ವಿಸರ್ಜಿಸುವ ಮೂಲಕ ಪೂಜಾ ಕೈಂಕರ್ಯಗಳು ಸಂಪನ್ನಗೊಂಡವು. ಜಗನ್ಮಾತೆಯು ಭಾಗವಹಿಸಿದ ಎಲ್ಲಾ ಮಾತೆಯಂದಿರಿಗೂ ಸಮಸ್ತ ಸಮಾಜ ಬಾಂಧವರಿಗೂ ಆಯುರಾರೋಗ್ಯ ಐಶ್ವರ್ಯಾದಿಗಳನ್ನು ಕರುಣಿಸಲಿ.
ಇತೀ
ಆಡಳಿತ ಮಂಡಳಿ.


ಮಂಗಳೂರು
ಇಂದು ಧ್ಯಾನ ಮಂದಿರದಲ್ಲಿ ಶ್ರೀಯುತ ವಿದ್ಯಾಶಂಕರ್ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಗೌರೀ ಪೂಜಾ ಕಾರ್ಯಕ್ರಮ ಜರುಗಿತು. ಸುಮಾರು ಇಪ್ಪತ್ತು ವನಿತೆಯರು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾದರು. ಪೂಜಾ ಕಾರ್ಯವನ್ನು ನಡೆಸಿಕೊಟ್ಟ ಶ್ರೀ ವಿದ್ಯಣ್ಣ ಅವರಿಗೆ ಗೌರವದ ನಮನಗಳು. ಭಾಗವಹಿಸಿ ಪ್ರೋತ್ಸಾಹಿಸಿದ ಎಲ್ಲಾ ಮಹಿಳೆಯರು ಅಭಿನಂದನಾರ್ಹರು. ಈ ಸಂದರ್ಭದಲ್ಲಿ ಪೂಜೆಯಲ್ಲಿ ಭಾಗವಹಿಸಿದ ಅಣ್ಣಂದಿರಿಗೂ ವಿಶೇಷ ವಂದನೆಗಳು.



ಬೆಳ್ತಂಗಡಿ


