
Article · September 16, 2026
ನಾನು ನೀನು
By ಶ್ರದ್ಧಾ ಭಟ್ ಕೆ ಎಸ್ ಚಂದುಕೂಡ್ಲು
ಶ್ರದ್ಧಾ ಭಟ್
ನಾನು ನಾಯಕಿ ಆದರೆ
ನಿನ್ನದೇ ಇತಿಹಾಸ
ನಾನು ಯಜಮಾನಿಯಾದರೆ
ನಿನ್ನದೇ ನಿವಾಸ
ನಾನು ಪದಗಳಾದರೆ
ನೀನು ಅದರ ಅರ್ಥ
ನಾನು ಆತ್ಮವಾದರೆ
ನೀನದರ ಸ್ವಾರ್ಥ
ನಾನು ಸ್ಪಂದನೆಯಾದರೆ
ನೀನದರ ಭಾವನೆ
ನಾನು ಪದಾರ್ಥವಾದರೆ
ನೀನದರ ಕಲ್ಪನೆ
ನಾನು ಕಾರ್ಯವಾದರೆ
ನೀನದರ ಅಪ್ಪಣೆ
ನಾನು ಧ್ಯಾನವಾದರೆ
ನೀನು ಅದರ ಜ್ಞಾನ
ಕಲ್ಪನೆಗೂ ಮೀರಿದ ಕಲ್ಪವೃಕ್ಷದಂತೆ ನೀನು
ನಿನ್ನ ಮನದ ಅಪೂರ್ವಸಾಗರವ ಗಂಗೆಯಂತೆ ಸೇರ ಬಯಸುವೆ ನಾನು
Creative Writings
