
Article · September 14, 2026
ಅಭ್ಯುದಯ .
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ಪ್ರಥಮ ಪೂಜಿತನಿಗಿದೊ ಪ್ರಥಮ ಪೂಜೆ. ಗುರು ಗಣಪತಿಯ ವಂದಿಸುತ, ಚೌತಿಯ ಶುಭ ಸಮಯದಲ್ಲಿ ಲೋಕಕ್ಕೆ ಮಂಗಳವಾಗಲಿ ಎಂದು ಹಾರೈಕೆಗಳು..
ಗಣಗಳಧಿಪತಿಯವನು
ಗಣಪತಿಯು ಬಂದ /
ಗಜದ ವದನವ ಹೊಂದಿದವನು
ಬಲು ಚಂದ /
ದೊಡ್ಡ ಉದರದ ಮೇಲೆ
ನಾಗನದು ಬಂಧ/
ಮೂಷಿಕನು ಜೊತೆಗಿರಲು
ಏನಿವನ ಚಂದ/
ವಿಘ್ನ ನಿವಾರಕನು
ಪಾರ್ವತಿಯ ಕಂದ/
ಚೌತಿಯಾ ದಿನದಂದು
ಧರೆಗಿಳಿದು ಬಂದ /
ಎಳ್ಳುಂಡಳಿಕ ಕಬ್ಬು
ಮೋದಕವ ತಿಂದ/
ಸರ್ವ ವಿಘ್ನವ ಕಳೆದು
ಅಭ್ಯುದಯ ತಂದ /
Creative Writings
