
Article · September 17, 2026
ಮಾತು.
By ಜಯಶ್ರೀ ಕೆ.ಆರ್ ಭಟ್, ಪಳ್ಳತಡ್ಕ .
ಜಯಶ್ರೀ ಐಲುಕುಂಜೆ
ಹಗಲಿದ್ದಾಗ ರಾತ್ರಿ ಇಲ್ಲ, ರಾತ್ರಿ ಇದ್ದಾಗ ಹಗಲಿಲ್ಲ.! ಆದ್ರೂ ಒಂದರ ಹಿಂದೆ ಇನ್ನೊಂದು, ಕ್ರಮವಾಗಿ ಸುತ್ತುವುದು ನಿಲ್ಲಿಸುವದಿಲ್ಲ
ಹಗಲು ಇರುಳು ಜೊತೆಗೆ ಸೇರಿ
ಮಾತನಾಡಬಯಸಿತು /
ಸಮಯ ನಿಗದಿ ಪಡಿಸಿ
ಮಾತನಾಡಲೆಂದು ಸೇರಿತು /
ಯಾಕೋ ಏನೋ ಇರುಳ ಕಪ್ಪು
ಬೆಳಕಿಗೆ ಭಯವಾಯಿತು /
ಬೆಳಕ ಪ್ರಭೆಗೆ ಹೆದರಿ ಇರುಳು
ಬಾಲ ಮುದುರಿ ಹೋಯಿತು /.
ಬೆಳಕು ಇರುವ ಕಡೆಗೆ
ಕರಿಯ ಕಪ್ಪು ರಾತ್ರಿ ಬಾರದು /
ಎರಡೂ ಜೊತೆಗೆ ಸೇರೋ ಸಮಯ
ಮುಂದಕೆಂದು ಬಾರದು!..
Creative Writings
