
Event · October 17, 2025
ಕರಾಡ ವಿಶ್ವ ವೆಬಿನಾರ್ ಸರಣಿ -30
18/10/2025ರ ಶನಿವಾರ ಸಂಜೆ 7.30ಕ್ಕೆ ; ವಿಷಯ: ಜೀವನ ; ಸಂಪನ್ಮೂಲ ವ್ಯಕ್ತಿ: ಶ್ರೀಯುತ ಕೋಟೆ ರಾಮ ಭಟ್, ಕಾರ್ಕಳ
ಕರಾಡ ವಿಶ್ವ ವೆಬಿನಾರ್ ಸರಣಿ -30 ಈ ಕಾರ್ಯಕ್ರಮದ ಅಂಗವಾಗಿ 18/10/2025ರ ಶನಿವಾರ ಸಂಜೆ 7.30ಕ್ಕೆ ಜೀವನ ಎನ್ನುವ ವಿಷಯದ ಕುರಿತು ಶ್ರೀಯುತ ಕೋಟೆ ರಾಮ ಭಟ್, ಕಾರ್ಕಳ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.
ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.
ಗೂಗಲ್ ಲಿಂಕ್: https://meet.google.com/jwo-yvyb-etc
ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
ಶ್ರೀಯುತ ಕೋಟೆ ರಾಮ ಭಟ್, ಕಾರ್ಕಳ
* 06-08-1945ರಂದು ಕೋಟೆ ಶಿರಂತಡ್ಕ ದಿ. ಸುಬ್ರಾಯ ಭಟ್ಟ - ದಿ. ಸರಸ್ವತಿ ಅಮ್ಮ ದಂಪತಿಯ ಪುತ್ರರಾಗಿ ಜನನ.
* ಪೆರ್ಲದ ಸತ್ಯನಾರಾಯಣ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾಭ್ಯಾಸ.
* ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪೂರೈಸಿದರು.
* ಕಾರ್ಕಳದ ವೆಂಕಟರಮಣ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಮೂರೂವರೆ ದಶಕಗಳ ಪ್ರಾಧ್ಯಾಪಕ ಸೇವೆ.
* ತಮ್ಮ 14ನೆಯ ವಯಸ್ಸಿನಲ್ಲಿ ಅರ್ಥದಾರಿಯಾಗಿ, 16ನೆಯ ವಯಸ್ಸಿನಲ್ಲಿ ವೇಷಧಾರಿಯಾಗಿ ಯಕ್ಷಗಾನ ರಂಗ ಪ್ರವೇಶ.
* ಅಪ್ರತಿಮ ನಟನಾ ಚಾತುರ್ಯ ಮತ್ತು ವಾಕ್ಚಾತುರ್ಯ.
* ಅನೇಕ ಸಂಘ-ಸಂಸ್ಥೆಗಳಲ್ಲಿ, ಸಾಹಿತ್ಯದ ವಿವಿಧ ಸ್ತರಗಳಲ್ಲಿ 120ಕ್ಕೂ ಹೆಚ್ಚಿನ ಭಾಷಣ-ಉಪನ್ಯಾಸ ನೀಡಿದ ಅನುಭವ.
* ವಿವಿಧೆಡೆ 100ಕ್ಕೂ ಹೆಚ್ಚಿನ ಧಾರ್ಮಿಕ ಭಾಷಣ ಮಾಡಿದ್ದಾರೆ.
* ಹಲವಾರು ಯಕ್ಷಗಾನ ಗೋಷ್ಠಿಗಳಲ್ಲಿ ವಿಚಾರ ಮಂಡನೆ.
* ನಾಟಕ, ಯಕ್ಷಗಾನದ ಕುರಿತು 150ಕ್ಕೂ ಹೆಚ್ಚು ಭಾಷಣ, ದಿಗ್ದರ್ಶನ.
* ನೂರಾರು ಯಕ್ಷಾಸಕ್ತರಿಗೆ ಯಕ್ಷಗಾನದ ಕುರಿತು ಸಲಹೆ, ಮಾರ್ಗದರ್ಶನ ಮತ್ತು ಸೂಕ್ತ ತರಬೇತಿ.
* ವಿವಿಧ ಪತ್ರಿಕೆಗಳಲ್ಲಿ 40ಕ್ಕೂ ಹೆಚ್ಚು ಮೌಲ್ಯಾಧಾರಿತ ಲೇಖನಗಳು ಪ್ರಕಟವಾಗಿವೆ.
* ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸೇವೆಗೆ ಹಲವಾರು ಪ್ರಶಸ್ತಿ, ಗೌರವಾದರಗಳು ಶ್ರೀಯುತರಿಗೆ ಅರ್ಹವಾಗಿ ಸಂದಿವೆ.
* ಸದಾ ನಗುಮೊಗ, ಎಲ್ಲರೊಂದಿಗೆ ಬೆರೆಯುವ ಆತ್ಮೀಯ ಸ್ವಭಾವ.
