
Article · August 22, 2026
ಬೇಟಿ ಬಚಾವೋ, ಬೇಟಿ ಪಢಾವೋ (ಬಿಬಿಬಿಪಿ) ಯೋಜನೆಗೆ ಪೂರಕವಾಗಿರುವ ಕಾಲೇಜುಗಳು..
By ಪ್ರವೀಣ ಪೊಸವಳ್ಯ ಬೆಲ್ಲ.
ದ.ಕ. ಜಿಲ್ಲೆಯ ಸರ್ಕಾರಿ ಮಹಿಳಾ ಶಿಕ್ಷಣ ಸಂಸ್ಥೆಗಳ/ಕಾಲೇಜುಗಳ ವಿವರಗಳು...
- ಪ್ರವೀಣ ಪಿ ಬಿ
ಕೇಂದ್ರ ಸರ್ಕಾರದ ಯೋಜನೆಯಾದ ಬೇಟಿ ಬಚಾವೋ, ಬೇಟಿ ಪಢಾವೋ (ಬಿಬಿಬಿಪಿ) ಯೋಜನೆಯು ಹೆಣ್ಣು ಮಕ್ಕಳನ್ನು ಶಿಕ್ಷಣದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಪ್ರಾರಂಬಿಸಿದ ಯೋಜನೆಯಾಗಿದೆ.ಪ್ರತಿ ಹೆಣ್ಣು ಮಗು ಪೂರ್ವ ಪ್ರಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣ ಪಡೆಯಲು ಈ ಯೋಜನೆಯು ಪ್ರಯೋಜನವಾಗಿದೆ.ಅದೆಷ್ಟೋ ಹೆಣ್ಣು ಮಕ್ಕಳು ನಾನಾ ಕಾರಣಗಳಿಂದ ಉನ್ನತ ಶಿಕ್ಷಣದಿಂದ ದೂರ ಇರುವುದನ್ನು ಗಮನಿಸಿ ಸರ್ಕಾರವು ಹಂತ ಹಂತವಾಗಿ ಬಾಲಕಿಯರಿಗಾಗಿ ಪದವಿ ಪೂರ್ವ ಕಾಲೇಜು,ಮಹಿಳಾ ಪ್ರಥಮ ದರ್ಜೆ ಕಾಲೇಜು, ಮಹಿಳಾ ಬಿ.ಇಡಿ ಕಾಲೇಜುಗಳು,ಮಹಿಳಾ ವಿ.ವಿ ಗಳು, ಸ್ಥಾಪನೆಗೊಂಡವು.
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಮಹಿಳಾ ಶಿಕ್ಷಣ ಸಂಸ್ಥೆಗಳು:
-ಬಾಲಕಿಯರ ಪದವಿ ಪೂರ್ವ ಕಾಲೇಜು ಬಲ್ಮಠ, ಮಂಗಳೂರು.
-ಮಹಿಳಾ ಪ್ರಥಮ ದರ್ಜೆ ಕಾಲೇಜು ಬಲ್ಮಠ ಮಂಗಳೂರು.
-ಬಾಲಕಿಯರ ಪದವಿ ಪೂರ್ವ ಕಾಲೇಜು ,ಮುಕ್ರಂಪಾಡಿ,
ಪುತ್ತೂರು. ದ.ಕ
-ಮಹಿಳಾ ಪ್ರಥಮ ದರ್ಜೆ ಕಾಲೇಜು ಬೊಳುವಾರು ಪುತ್ತೂರು.ದ.ಕ
-ಬಾಲಕಿಯರ ಪದವಿಪೂರ್ವ ಕಾಲೇಜು ಬಲ್ಮಠ ಮಂಗಳೂರು:
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಹೃದಯಭಾಗವಾದ ಜ್ಯೋತಿ ವೃತ್ತದ ಸಮೀಪ ಬಲ್ಮಠದಲ್ಲಿದೆ. ಕಲಾ, ವಾಣಿಜ್ಯ, ವಿಜ್ಞಾನ ಮೂರು ವಿಷಯಗಳಲ್ಲಿ ವಿದ್ಯಾರ್ಥಿನಿಯರಿಗೆ ಪಿ.ಯು.ಸಿ ಅದ್ಯಯನ ಮಾಡಲು ಅವಕಾಶವಿದೆ.ಇಲ್ಲಿನ ಕಾಲೇಜು ಶುಲ್ಕವು,ಸರ್ಕಾರಿ ಆದೇಶದಂತೆ ಅತಿ ಕಡಿಮೆ ಇರುತ್ತದೆ.
ಮಂಗಳೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜು ನಗರದ ಬಲ್ಮಠದಲ್ಲಿದೆ. ಇಲ್ಲಿ ಕಲಾ ,ವಾಣಿಜ್ಯ ವಿಜ್ಞಾನ ಪದವಿ ಕೋರ್ಸ್ ಗಳು ಇದ್ದು , ಮಂಗಳೂರು ಮಾತ್ರವಲ್ಲದೆ ಬಂಟ್ವಾಳ,ಮಂಜೇಶ್ವರ,ಪಡುಬಿದ್ರಿ ಮುಂತಾದ ಊರುಗಳಿಂದ ವಿದ್ಯಾರ್ಥಿನಿಯರು ಬಂದು ಇಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.
ಪುತ್ತೂರಿನಲ್ಲಿರುವ ಬಾಲಕಿಯರ ಪಿ.ಯು ಕಾಲೇಜು ಹೊರ ವಲಯದ ಮುಕ್ರಂಪಾಡಿಯಲ್ಲಿದೆ .ಇಲ್ಲಿ ಆರ್ಟ್ಸ್,ಕಾಮರ್ಸ್ ಮತ್ತು ಸಯನ್ಸ್ ವಿಭಾಗಳಿವೆ. ಇಲ್ಲಿಗೆ ಪುತ್ತೂರು,ಸುಳ್ಯ,ಬೆಳ್ಳಾರೆ ಮಾತ್ರವಲ್ಲದೆ ಕೇರಳದ ಗಡಿ ಭಾಗಗಳಾದ ಈಶ್ವರಮಂಗಲ,ಸುಳ್ಯಪದವು,ಮುಂತಾದ ಪ್ರದೇಶಗಳಿಂದ ವಿದ್ಯಾರ್ಥಿನಿಯರು ಬಂದು ಶಿಕ್ಷಣ ಪಡೆಯುತ್ತಿದ್ದಾರೆ.ಈ ಕಾಲೇಜು ತಾಲೂಕಿನ ಏಕೈಕ ಮಹಿಳಾ ಪಿ.ಯು. ಕಾಲೇಜ್ ಆಗಿದೆ
ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜು ನಗರ ಪ್ರದೇಶದ ಬೊಳ್ವಾರಿನಲ್ಲಿದೆ.ಇಲ್ಲಿ ಆರ್ಟ್ಸ್,ಕಾಮರ್ಸ್,ಸಯನ್ಸ್
ಪದವಿ ವಿಭಾಗಗಳಿದ್ದು ,ಪುತ್ತೂರು ಮಾತ್ರವಲ್ಲದೆ ಸುತ್ತುಮುತ್ತಲಿನ ತಾಲೂಕು ಹಾಗೂ ಕೇರಳದ ಮಂಜೇಶ್ವರ ತಾಲೂಕಿನ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
ಈ ಎಲ್ಲಾ ಕಾಲೇಜುಗಳು ಸರ್ಕಾರವು ನಿಗದಿಪಡಿಸಿದ ಅತೀ ಕಡಿಮೆ ಶುಲ್ಕದಲ್ಲಿ ಗುಣ ಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿನಿಯರಿಗೆ ನೀಡುತ್ತಿವೆ. ಪದವಿ ಶಿಕ್ಷಣದಲ್ಲಿ ಸರ್ಕಾರದಿಂದ ಶುಲ್ಕ ಮರು ಪಾವತಿ ವ್ಯವಸ್ಥೆಯೂ ಇರುತ್ತದೆ.ಇದರಿಂದಾಗಿ ಎಲ್ಲಾ ವಿದ್ಯಾರ್ಥಿನಿಯರೂ ಉನ್ನತ ಶಿಕ್ಷಣ ಪಡೆಯುವಂತೆ ಅವಕಾಶ ದೊರಕಿದಂತಾಗುತ್ತದೆ
-ಪ್ರವೀಣ. ಪೊಸವಳ್ಯ ಬೆಲ್ಲ.
9449448912
