Karada Vishwa

Article · November 10, 2025

ಕಾಡು ಮಾವಿನ ಹಣ್ಣಿನ ಪಾಯಸ

- ಪಲ್ಲವಿ, ಗಿರಿ

ಸಾಮಾಗ್ರಿಗಳು:
– ಕಾಡು ಮಾವಿನ ಹಣ್ಣು – 25 
– ಬೆಲ್ಲ – 1 ಕೆಜಿ
– ಕಾಯಿ ಹಾಲು – 1 ಲೀಟರ್

ಮಾಡುವ ವಿಧಾನ:
ಮೊದಲಿಗೆ ಕಾಡು ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು, ಸುಲಿದು , ಗೊರಟು ಸಮೇತ ಬೇಯಿಸಬೇಕು.
 ಬೆಂದಮೇಲೆ ಬೆಲ್ಲ ಹಾಕಿ. ಬೆಂದು ಬೆಲ್ಲ ಸಂಪೂರ್ಣ ಕರಗಿದ ಮೇಲೆ ಕಾಯಿ ಹಾಲು ಸೇರಿಸಿ ಕುದಿಸಬೇಕು.

ವಿ.ಸೂ: ಯಾವುದೇ ಹಂತದಲ್ಲಿಯೂ ತಳ ಹಿಡಿಯದಂತೆ ಜಾಗ್ರತೆ ವಹಿಸಿ. 
ತೆಂಗಿನ ಕಾಯಿ ಹಾಲಿನ ಬದಲು ತೆಂಗಿನ ಕಾಯಿ ರುಬ್ಬಿ ಹಾಕಿಯೂ ಮಾಡಬಹುದು.

ಈ ಪಾಯಸವನ್ನು ನೀರುದೋಸೆಯ ಜೊತೆಗೆ ಸೇವಿಸಿದರೆ ರುಚಿಯಾಗಿರುತ್ತದೆ.

Food
ಕಾಡು ಮಾವಿನ ಹಣ್ಣಿನ ಪಾಯಸ