Karada Vishwa

Event · December 6, 2025

ಕರಾಡ ವಿಶ್ವ ವೆಬಿನಾರ್ ಸರಣಿ -32

ದಿನಾಂಕ : 13/12/2025ರ ಶನಿವಾರ ಸಂಜೆ 7.30ಕ್ಕೆ ವಿಷಯ : ಕೃಷಿಯಲ್ಲಿ ಖುಷಿ ಸಂಪನ್ಮೂಲ ವ್ಯಕ್ತಿ: ಶ್ರೀಯುತ ಶ್ರೀಹರಿ ಭಟ್, ಸಜಂಗದ್ದೆ

ಈ ಸರಣಿ ಕಾರ್ಯಕ್ರಮದ ಅಂಗವಾಗಿ 13/12/2025ರ ಶನಿವಾರ ಸಂಜೆ 7.30ಕ್ಕೆ ಕೃಷಿಯಲ್ಲಿ ಖುಷಿ ಎನ್ನುವ ಅನನ್ಯ ವಿಷಯದ ಕುರಿತು ಶ್ರೀಯುತ ಶ್ರೀಹರಿ ಭಟ್, ಸಜಂಗದ್ದೆ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.

ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ  off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.

ಗೂಗಲ್ ಲಿಂಕ್: https://meet.google.com/ykz-gpuu-tfj



ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
★ ಕಾಸರಗೋಡು ಜಿಲ್ಲೆ, ಮಂಜೇಶ್ವರ ತಾಲೂಕು, ಪಡ್ರೆ ಗ್ರಾಮದ ಸಜಂಗದ್ದೆ ನಾರಾಯಣ ಭಟ್ -ಗಿರಿಜಾ ದಂಪತಿಯ ಹಿರಿಯ ಮಗ. ಕೃಷಿ ಕುಟುಂಬ.
★ ಜನನ 23-5-1953.
★ ಸ್ವರ್ಗ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ.
★ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ಪಿಯುಸಿ.
★ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ವಿಜ್ಞಾನ ಪದವಿ ಓದು.
★ ತಂದೆಯೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿ 1975ರಿಂದ ಮನೆಯ ಪೂರ್ಣ ಜವಾಬ್ದಾರಿ.
★ ಕರಾಡ ಸಮಾಜದ ಶಂಕರ ಸದನ ಸಮಿತಿಯಲ್ಲಿ ಉಸ್ತುವಾರಿ.
★ ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕನಾಗಿ ಆಯ್ಕೆಯಾಗಿ ವರ್ಷದ ನಂತರ ಅಧ್ಯಕ್ಷನಾಗಿ ನಿಯುಕ್ತಿ.
★ತನ್ಮಧ್ಯೆ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕನಾಗಿ ಆಯ್ಕೆಯಾಗಿ ಹತ್ತು ವರ್ಷಗಳ ಕಾಲ ಸೇವೆ.
★ ಶಂಕರ ಸದನ ಸಮಿತಿಯ ಕಾರ್ಯದರ್ಶಿಯಾಗಿ,
ಕರಾಡ ಬ್ರಾಹ್ಮಣ ಅಭ್ಯುದಯ ಸಂಘದ ಅಧ್ಯಕ್ಷರಾಗಿ ಸೇವೆ.
★ ಪಡ್ರೆಯ ನೀರೊತ್ತಾಯದ ಸನ್ನಿವೇಶದಲ್ಲಿ 'ನೀರ ನೆಮ್ಮದಿಯತ್ತ ಪಡ್ರೆ' ವಾಟ್ಸಪ್ ಗುಂಪು ರಚನೆ. ಜಲವೃದ್ಧಿಯ ಕಾರ್ಯಯೋಜನೆ ಮುಂದಿಟ್ಟುಕೊಂಡು 'ನೀನೆಪ'ದ ಅಧ್ಯಕ್ಷ ಪದ.
★ ಪಡ್ರೆಯಲ್ಲಿ ನೀರ ನೆಮ್ಮದಿಗಾಗಿ 'ಕಟ್ಟದ ಹಬ್ಬ' ಆಯೋಜನೆ.
★ 'ನಮ್ಮ ಮನೆಗೆ ನಮ್ಮದೇ ತರಕಾರಿ' ಧ್ಯೇಯದ ವಾಟ್ಸಪ್ ಗುಂಪಿನ ಕ್ರಿಯಾಶೀಲ ಸದಸ್ಯ.
★ ಆಳ ತೋಟದಿಂದ ಅಂಗಳಕ್ಕೆ ಹೊರೆ ಸಾಗಣೆಯ ರೋಪ್‌ವೇ ಅಳವಡಿಕೆ.
★ ಕೃಷಿ ಚಟುವಟಿಕೆಗಳು ಮತ್ತಷ್ಟು ಸುಲಭವಾಗುವಂತಾಗಲು ತಮ್ಮ ಅಡಿಕೆ ತೋಟದ ನಡುವೆ ಮಾರ್ಗ ಮಾಡಿ ಸಮಯ, ಹಣ, ಶ್ರಮ ಉಳಿಸಿದ ಛಾತಿ.
★ ಅಡಿಕೆ ಹಾಗೂ ಇನ್ನಿತರ ತೋಟಗಾರಿಕಾ ಬೆಳೆಗಳ ಮತ್ತು ಸಾವಯವ ತರಕಾರಿಗಳ ಕೃಷಿ, ಯಂತ್ರಾನ್ವೇಷಣೆ, ಕಟ್ಟ ಸಂಸ್ಕೃತಿ ವಿಚಾರಗಳ ಸುತ್ತ ಆಕಾಶವಾಣಿಯಲ್ಲಿ ಸಂದರ್ಶನಗಳು ಬಿತ್ತರ.
★ ಹೆಚ್ಚಿನವರ ಬಾಯಿಯಲ್ಲಿ ನೆಚ್ಚಿನ 'ಹರಿಯಣ್ಣ', ಮಿತಭಾಷಿ.


Webinar
ಕರಾಡ ವಿಶ್ವ ವೆಬಿನಾರ್ ಸರಣಿ -32