
News · September 17, 2026
‘ಹೆಗ್ಗಣ ಮುದ್ದು’ ಟ್ರೇಲರ್ ಬಿಡುಗಡೆ
ಕರಾಡ ಪ್ರತಿಭೆಗಳಾದ ಅವಿನಾಶ್ ಬಲೆಕ್ಕಳ ನಿರ್ದೇಶನ ಹಾಗೂ ನಚಿಕೇತ್ ಬಲೆಕ್ಕಳ ಅವರ ಛಾಯಾಗ್ರಹಣ...ಬಲೆಕ್ಕಳ ಸಹೋದರರಿಗೆ ಕರಾಡ ವಿಶ್ವದ ಅಭಿನಂದನೆಗಳು
ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ನಿರ್ಮಾಣದ ಹೊಸ ಕನ್ನಡ ಚಿತ್ರ ‘ಹೆಗ್ಗಣ ಮುದ್ದು’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಹೊಸದಾಗಿ ಮದುವೆಯಾದ ದಂಪತಿಯ ಸಂಬಂಧದ ಸುತ್ತ ಹೆಣೆದಿರುವ ಈ ಕೌಟುಂಬಿಕ ಮನರಂಜನಾತ್ಮಕ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಚಿತ್ರದ ಮೂಲಕ ಕರಾಡ ಪ್ರತಿಭೆ ಅವಿನಾಶ್ ಬಲೆಕ್ಕಳ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಪೂರ್ಣಚಂದ್ರ ಮೈಸೂರು ಹಾಗೂ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ನಚಿಕೇತ್ ಬಲೆಕ್ಕಳ ಅವರು ಮಾಡಿದ್ದಾರೆ.
ಟ್ರೇಲರ್ ಈಗಾಗಲೇ ಗಮನ ಸೆಳೆಯುತ್ತಿದ್ದು, ಚಿತ್ರವು ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕರಾಡ ವಿಶ್ವದ ವತಿಯಿಂದ ಅವಿನಾಶ್ ಬಲೆಕ್ಕಳ ಹಾಗೂ ನಚಿಕೇತ್ ಬಲೆಕ್ಕಳ ಅವರಿಗೆ ಹಾರ್ದಿಕ ಶುಭಾಶಯಗಳು. ಎಲ್ಲರೂ ಮುಂದೆ ಚಿತ್ರವನ್ನು ನೋಡಿ ನಮ್ಮ ಪ್ರತಿಭೆಗಳನ್ನು ಪ್ರೋತ್ಸಾಹಿಸಿ.
ಟ್ರೇಲರ್ ಲಿಂಕ್ :
https://youtu.be/ud4-DR6VkK4?si=Rm52OYYAb3D-Wqyx
ಅವಿನಾಶ್ ಬಲೆಕ್ಕಳ ಹಾಗೂ ತಂಡದೊಂದಿಗೆ ಸಂದರ್ಶನ :
