Karada Vishwa

Article · November 9, 2026

ಪ್ರೀತಿ -ರೀತಿ

By ದಿವ್ಯಾ ಶಿರಂತಡ್ಕ

ದಿವ್ಯಾ ಬಿ ಶಿರಂತಡ್ಕ

ಸಾಧನೆಯ ಒಂದೊಂದೇ ಶಿಖರವನ್ನು ಏರುವ ಅವನದು ದಿಗ್ವಿಜಯವೋ ಎಂದು ಹಲವು ಬಾರಿ ನಾನು ಯೋಚಿಸುವುದಿದೆ... ಆಗಸಕ್ಕೇ ಏಣಿ ಇಡುವ ಸ್ವಭಾವದವ.. ಸೊನ್ನೆಯಿಂದ ಸರ್ವಸ್ವವನ್ನೂ ಪಡೆದಿದ್ದಾನೆ. ಇಂತಹ ದೊಡ್ಡ ಕಂಪನಿಯ ಎಂ.ಡಿ ಯ ಪತ್ನಿ ನಾನು ಎನ್ನುವುದರಲ್ಲಿ ಮೊದಲಿದ್ದ ಉತ್ಸಾಹ ಈಗೀಗ ಯಾಕೋ ಇಲ್ಲ. ಅವನೋ ಕಾಲಚಕ್ರದ ಜೊತೆಗೆ ಗಿರಗಿರನೆ ತಿರುಗುತ್ತಿದ್ದಾನೆ, ಮಿರಮಿರನೆ ಮಿಂಚುತ್ತಿದ್ದಾನೆ. ಎಲ್ಲವೂ ನಿನಗಾಗಿ ಎಂದು ಕೀಲಿ ಕೈಯನ್ನು ನನ್ನಲ್ಲೇ ಕೊಟ್ಟಿರುತ್ತಾನಲ್ಲ!

ಅತ್ಯಪರೂಪವೆಂಬಂತೆ ಮೊನ್ನೆ ಕೈಯಲ್ಲಿ ಬಾಳೆ ಎಲೆಯಲ್ಲಿ ಸುತ್ತಿದ ಮಲ್ಲಿಗೆಯ ದಂಡೆಯನ್ನು ನನ್ನ ಕೈಗಿತ್ತು " ಹೂ ಮಾರುವ ಅಜ್ಜಿಯ ಒತ್ತಾಯಕ್ಕೆ ಮಣಿಯದೆ ಆಗಲಿಲ್ಲ" ಎನ್ನುತ್ತಾ ನಕ್ಕಾಗ ನಾನು ಸಾರ್ವಭೌಮನ ರಾಣಿ ಆಗದೆ, ಅತ್ಯಂತ ಸಂತಸದ ಮಡದಿಯಾದೆ. ಅವರತ್ತ ಕೈ ನೀಡಲಿಲ್ಲ.. ತಿರುಗಿ ಜಡೆಯನ್ನೇ ಅವರಿಗೊಪ್ಪಿಸಿ ಹಗುರವಾದೆ.

Creative Writings