Karada Vishwa

Article · August 15, 2026

ವಂದಿಸಿ ಮಾತೆಗೆ

By ಪ್ರಸನ್ನ ಪ್ರಸಾದ್ ಆವಳಮಠ

- ಪ್ರಸನ್ನ ಪ್ರಸಾದ್ ಆವಳಮಠ

‎‎ಏರಲಿದೆ ಬಾವುಟ ಏಕತೆಯ ಸಾರುತ
‎ಕೇಸರಿ ಬಿಳಿ ಹಸಿರು ಮೂರು ಬಣ್ಣ ಮೂಡುತ
‎ಹಾರಲಿ ಮೇಲೇರಲಿ ಬಾನೆತ್ತರದಿ ಹಾರಾಡಲಿ...

‎ಸ್ಮರಿಸುವ ವೀರರ ಗೌರವ ನೀಡುವ
‎ಭಾರತಾಂಬೆಯ ರಕ್ಷಣೆ ಮಾಡುವ
‎ದೇಶ ಪ್ರೇಮವ ಹುಟ್ಟು ಹಾಕುವ
‎ವಂದಿಸಿ ಮಾತೆಗೆ ಭರತ ಮಾತೆಗೆ ......

‎ಸ್ವತಂತ್ರ ನಾಡಿದು ಸುಂದರ ಬೀಡಿದು
‎ಸತ್ಯ ಶಾಂತಿ ತ್ಯಾಗವೆಂಬ ಮಂತ್ರವದು
‎ಮೊಳಗಿದೆ ನಾಡೆಲ್ಲೆಡೆ ತ್ರಿವರ್ಣ ಸಂಭ್ರಮ
‎ವಂದಿಸಿ ಮಾತೆಗೆ ಭರತ ಮಾತೆಗೆ....

‎ಮರೆಯುವ ಜಾತಿಯ ಹಂಚುವ ಪ್ರೀತಿಯ
‎ಸ್ವಾತಂತ್ರ್ಯ ದಿನವನು ಆಚರಿಸುವ
‎ಭಾರತೀಯರೆಂಬ ಹೆಮ್ಮೆಯಿಂದ
‎ವಂದಿಸಿ ಮಾತೆಗೆ ಭರತ ಮಾತೆಗೆ.....

‎ಹಾರಲಿ ಮೇಲೇರಲಿ ಧ್ವಜದ ಕೀರುತಿ
‎ಹಾರಲಿ ಮೇಲೇರಲಿ ಬಾನೆತ್ತರದಿ ಹಾರಾಡಲಿ
‎ತಿರಂಗಾದ ರಂಗು ಎಲ್ಲೆಡೆ ಪಸರಿಸಲಿ
‎ವಂದಿಸಿ ಮಾತೆಗೆ ಭರತ ಮಾತೆಗೆ......


Creative Writings
ವಂದಿಸಿ ಮಾತೆಗೆ