Karada Vishwa

Article · October 10, 2026

ವೇದ ಲೋಕದ ಮಾಂತ್ರಿಕ....

By ಜಯಶ್ರೀ ಕೆ. ಆರ್ ಭಟ್, ಪಳ್ಳತಡ್ಕ.

ಜಯಶ್ರೀ ಐಲುಕುಂಜೆ

ನಮ್ಮೆಲ್ಲರಿಗೆ ಪುರೋಹಿತರಾಗಿದ್ದ ಸಜಂಗದ್ದೆ ಶ್ರೀಧರ ಭಟ್ ಮುದ್ದುಣ್ಣ ಅವರಿಗಾಗಿ ಎರಡು ಸಾಲುಗಳು.

ಮರಳಿ ಬಾರದ ಲೋಕ ಸೇರಿದ
ಏರು ಸ್ವರದಾ ಮಾಂತ್ರಿಕ/

ಇವರು ಹೇಳುವ ಮಂತ್ರ ದೂರಕೆ
ಕೇಳುವುದು ಸ್ವಾಭಾವಿಕ /

ದೊಡ್ಡ ಸ್ವರದಲಿ ಮಂತ್ರ ಘೋಷವ
ಮೊಳಗಿಸಿದ ಈ ಪುರೋಹಿತ /

ಸ್ವಾರ್ಥವೆಂಬುದು ಇರಲೆ ಇಲ್ಲ,
ಇದ್ದುದೆಲ್ಲವು ಪರಹಿತ /

ಅವರು ಇದ್ದೆಡೆ ವೇದ ಮಂತ್ರವು
ಸ್ಪಷ್ಟವಾಗಿ, ಸುಲಲಿತ /

ಇವರು ಮಾಡುವ ಕೆಲಸವೆಲ್ಲ
ಊರಜನರಿಗೆ, ಜನಹಿತ /

ಕಷ್ಟವಿರಲೀ ಸುಖವೆ ಇರಲೀ
ಶುಭಕು ಅಶುಭಕು ಸಮ್ಮಖ /

ಊರ ಮಂದಿಗೆ ಹಿರಿಯ ಸ್ನೇಹಿತ,
ಹೆಗಲ ನೀಡುವ ಹಿರಿಸಖ /

ಜ್ಞಾನ ವೃಕ್ಷವು ಹರಡಿ ನಿಂತಿತು
ದೂರ ಶಾಖೆಯ ಚಾಚುತ/

ಹೊಸತು ಗಿಡಗಳು ಹುಟ್ಟಿ ಬಂದವು
ಜ್ಞಾನ ನಿಧಿಯನು ಬಾಚುತ /

ಏರು ಸ್ವರದಾ ಮಂತ್ರ ಘೋಷವು
ಇಂದು ನಭವನು ಏರಿತು /

ಪಂಚಭೂತಗಳೊಡೆಯನಾಗಿಹ
ಪರಮ ಧಾಮವ ಸೇರಿತು /

ಎಲ್ಲರಾ ಹಿತ ಬಯಸಿದಂತಹ
ಸದ್ಗುಣನು ಈ ಗುಣ ನಿಧಿ /

ತಪ್ಪದೇ ಪಡೆಯುವುದು ನಿಶ್ಚಿತ
ದೇವ ಪಾದದ ಸನ್ನಿಧಿ /

Creative Writings