
Article · October 20, 2026
ಹಳೆಯ ಮನೆ
By ದಿವ್ಯಾ ಶಿರಂತಡ್ಕ
ದಿವ್ಯಾ ಬಿ ಶಿರಂತಡ್ಕ
ಮಣ್ಣಿನ ನೆಲ ಮುಳಿ ಹುಲ್ಲ ಹೊದಿಕೆ
ಮುಂದೆ ಒಂದಿಷ್ಟು ಚಿತ್ತಾರ ಅದಕೆ
ಬಿಸಿಲು ಮಳೆ ಗಾಳಿ ಬರಲು ಬಳಿಗೆ
ನಾವಾತುಕೊಂಡಿದ್ದೆವು ಇದರ ಒಳಗೆ..
ಚಿಕ್ಕ ಮನೆಯೊಳು ಕಂಡ ಕನಸು ನೂರು
ಮನದಲ್ಲೇ ಕಟ್ಟುತ್ತಾ ಹೊಸದೊಂದು ಸೂರು
ಸೆಗಣಿ ಸಾರಿಸಿ ಚೊಕ್ಕ ಮಾಡಿ ಉಸಿರೆಳೆದಾಗ
ಪುಟ್ಟ ಕಂದನ ಕಾಲು ಕಪ್ಪಾಯಿತಾಗ..
ಪಕ್ಷಿ ಮರಗಳ ನಡುವೆ ಇದ್ದ ಪ್ರೇಮದ ಹಾಗೆ
ಬಂದವರು ಮನೆಯೊಳಗೆ ಸೇರಿ ಹೋಗಿ
ಬೆರೆತು ಒಂದಾದಂತೆ ಹೃದಯಗಳ ಭಾರವದು
ಕರಗಿ ಮನ ತಿಳಿಯಾದ ಮುಗಿಲಿನಂತೆ..
ತಲೆ ಎತ್ತಿಹುದಿಂದು ಬಲುದೊಡ್ಡ ಮಹಲುಗಳು
ಮನೆ ಮನದೊಳಗೂ ಹಲವು ಕೋಣೆಗಳು
ಮಣ್ಣಿನ ಮನೆಯೊಳಗಿತ್ತು ಬಾಂಧವ್ಯ ತಣ್ಣಗೆ
ದೊಡ್ಡ ಮನೆಯ ಕೋಣೆಯೊಳಗೆಲ್ಲಾ ಇನ್ನೂ ಬಿಸಿ ಹಗೆ!!
Creative Writings
