
Event · March 10, 2026
ಕರಾಡ ವಿಶ್ವ ವೆಬಿನಾರ್ ಸರಣಿ -35
ದಿನಾಂಕ : 14/03/2026ರ ಶನಿವಾರ, ಸಂಜೆ 7.30ಕ್ಕೆ ; ವಿಷಯ : ಮಾಧ್ಯಮ ಕ್ಷೇತ್ರದ ಇಂದಿನ ಸ್ಥಿತಿ ಗತಿ ; ಸಂಪನ್ಮೂಲ ವ್ಯಕ್ತಿ : ಶ್ರೀಯುತ ಪಿ. ಎಸ್. ಸೂರ್ಯನಾರಾಯಣ ಭಟ್
ಕರಾಡ ವಿಶ್ವ ವೆಬಿನಾರ್ ಸರಣಿ ಕಾರ್ಯಕ್ರಮದ ಅಂಗವಾಗಿ 14/03/2026ರ ಶನಿವಾರ ಸಂಜೆ 7.30ಕ್ಕೆ ಮಾಧ್ಯಮ ಕ್ಷೇತ್ರದ ಇಂದಿನ ಸ್ಥಿತಿ ಗತಿ ಎನ್ನುವ ಪ್ರಚಲಿತ ವಿಷಯದ ಕುರಿತು ಶ್ರೀಯುತ ಪಿ. ಎಸ್. ಸೂರ್ಯನಾರಾಯಣ ಭಟ್ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.
ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.
ಗೂಗಲ್ ಲಿಂಕ್: https://meet.google.com/ykz-gpuu-tfj
ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
★ 04-08-1966ರಂದು ಕಾಸರಗೋಡು ತಾಲೂಕಿನ ಪಾತನಡ್ಕ ಸುಬ್ರಹ್ಮಣ್ಯ ಭಟ್ ಮತ್ತು ದುಗ್ಗಮ್ಮ ದಂಪತಿಯ ಮಗನಾಗಿ ಜನನ.
★ ಎಎಲ್‌ಪಿ ಶಾಲೆ ಚೆನ್ನಾಂಗೋಡು ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ.
★ ಮುಳ್ಳೇರಿಯಾದಲ್ಲಿ ಮಾಧ್ಯಮಿಕ, ಹೈಸ್ಕೂಲ್ ಶಿಕ್ಷಣ.
★ ಅಳಿಕೆಯ ಸತ್ಯಸಾಯಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ.
★ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಬಿಎಸ್‌ಸಿ ಶಿಕ್ಷಣ.
★ ಮಂಗಳೂರಿನ ಮಂಗಳ ಗಂಗೋತ್ರಿಯಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್‌ಸಿ ಸ್ನಾತಕೋತ್ತರ ಶಿಕ್ಷಣ.
★ ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ 4 ವರ್ಷ ತಾತ್ಕಾಲಿಕ ಉಪನ್ಯಾಸಕರಾಗಿ ಸೇವೆ.
★ ಹವಾಮಾನ ಇಲಾಖೆಯಲ್ಲಿ ಸೀನಿಯರ್ ಅಬ್ಸರ್ವರ್ ಆಗಿ ಹೊನ್ನಾವರದಲ್ಲಿ ಒಂದು ವರ್ಷ ಸೇವೆ.
★ ಪ್ರಸಾರ ನಿರ್ವಾಹಕನಾಗಿ ಆಕಾಶವಾಣಿ ಚಿತ್ರದುರ್ಗದಲ್ಲಿ ವೃತ್ತಿಜೀವನ ಪ್ರಾರಂಭ.
★ ನಂತರ ಆಕಾಶವಾಣಿ ಮಂಗಳೂರು, ಆಕಾಶವಾಣಿ ಕಾರವಾರದಲ್ಲಿ ಕಾರ್ಯಕ್ರಮ ನಿರ್ವಾಹಕ ಹಾಗೂ ಸಹಾಯಕ ನಿರ್ದೇಶಕರಾಗಿ ದಶಕಗಳ ಕಾಲ ಕಾರ್ಯ ನಿರ್ವಹಿಸಿ ಕೆಲ ತಿಂಗಳ ಹಿಂದೆ ವಯೋ ನಿವೃತ್ತಿ.
★ ಆಕಾಶವಾಣಿಯಲ್ಲಿ ನಾಟಕ, ಯಕ್ಷಗಾನ, ಯುವವಾಣಿ ಮುಂತಾದ ವಿಭಾಗಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ.
★ ಬರವಣಿಗೆ, ನಾಟಕ, ಸ್ಪರ್ಧಾತ್ಮಕ ಪರೀಕ್ಷೆ , ನಾಯಕತ್ವ ಗುಣ ಮುಂತಾದ ವಿಷಯಗಳ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಲವು ಕಾರ್ಯಾಗಾರಗಳ ಯಶಸ್ವಿ ಆಯೋಜನೆ.
★ ಪತ್ರಿಕೆ ಮತ್ತು ರೇಡಿಯೋದಲ್ಲಿ ಹಲವಾರು ಲೇಖಗಳು ಪ್ರಕಟಗೊಂಡಿವೆ.
★ ಪ್ರಸ್ತುತ Sound Spot Enterprises ಎಂಬ ಜಾಹೀರಾತು ಸಂಸ್ಥೆ ಪ್ರಾರಂಭಿಸಿದ್ದಾರೆ.
★ ಪತ್ನಿ ಶ್ರೀಮತಿ ಮಮತಾ ಮತ್ತು ಪುತ್ರ ಸುಬ್ರಹ್ಮಣ್ಯ ಭಟ್ ಇವರೊಂದಿಗೆ ಮಂಗಳೂರಿನ ಬೋಂದೇಲ್‌ನಲ್ಲಿ ವಾಸ.
★ ನಿಗರ್ವಿ, ಹಸನ್ಮುಖಿ, ಮಿತಭಾಷಿ.
Webinar
