
Article · January 22, 2026
ಕುಂಭ ಮೇಳ
ಕವಯಿತ್ರಿ : ಜಯಶ್ರೀ ಕೆ ಆರ್ ಭಟ್ ಪಳ್ಳತ್ತಡ್ಕ
ಅಲ್ಲಿ ನಡೆದಿತ್ತಂದು ಆ ಕುಂಭ ಮೇಳ
ತಡೆ ಇಲ್ಲದಂತೆ ಜನಸೇರಿ ಧಾರಾಳ
ಪವಿತ್ರ ಸ್ಥಳವು ಅದು ಪ್ರಯಾಗ ರಾಜ
ಭಕ್ತಿಯ ಪರಾಕಾಷ್ಟೆ ಎಂಬುದದುವೆ ನಿಜ
ಸಂಗಮದ ಜಲದಲ್ಲಿ ಪವಿತ್ರ ಸ್ನಾನ
ತೊಡೆದು ಹಾಕುವುದಂತೆ ಎಲ್ಲ ಪಾಪವನ
ನೂಕುನುಗ್ಗಲಿನಲ್ಲಿ ಸಿಲುಕಿ ಹಲಮಂದಿ
ಬಿದ್ದಂತೆಯೇ ಹೋದರು ಮರಣ ಹೊಂದಿ
ನೂಕಾಟ, ತಳ್ಳಾಟ ಅದು ಸಹಜವಿತ್ತು
ಇದಕೆ ಕಾರಣವೆನಲು "ಕಳ್ಳಾಟವಿತ್ತು"
ಅದಕೆಂದೆ ಬಂದವರು ಇರಲು ಹಲಮಂದಿ
ಧರಿಸಿ ಮುಖವಾಡಗಳ ಬರಲು ಛಲ ಹೊಂದಿ
ಹೇಗಾದರೂ ಕೆಡುಕು ಮಾಡೊ ಉದ್ದೇಶ
ಇವರ ನಡುವಿರೆ ಉಳಿದು ಬಿಡುವುದೇ ಶ್ವಾಸ?
ಹಲಸಾಧನೆಯ ಗೈದ ಸಾಧು ಸಂತರಿಹರು
ದೇಶ, ಸಂಸ್ಕೃತಿಯನ್ನು ಉಳಿಸ ಹೊರಟವರು
🪻🪻🪻🪻🪻
Creative Writings
