Karada Vishwa

News · August 9, 2025

ವಿವಿಧೆಡೆಗಳಲ್ಲಿ ಸಾಮೂಹಿಕ ಋಗುಪಾಕರ್ಮ

ಶ್ರಾವಣ ಶುಕ್ಲ ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ, ಕರಾಡ ಬ್ರಾಹ್ಮಣ ಸಮುದಾಯದ ವತಿಯಿಂದ ವಿವಿಧೆಡೆಗಳಲ್ಲಿ ಸಾಮೂಹಿಕ ಋಗುಪಾಕರ್ಮ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

ಶ್ರಾವಣ ಶುಕ್ಲ ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ, ಕರಾಡ ಬ್ರಾಹ್ಮಣ ಸಮುದಾಯದ ವತಿಯಿಂದ ವಿವಿಧೆಡೆಗಳಲ್ಲಿ ಸಾಮೂಹಿಕ ಋಗುಪಾಕರ್ಮ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಅಗಲ್ಪಾಡಿ,  ಚೇರ್ಕಬೆ, ಬೆಂಗಳೂರು, ಮೈಸೂರು, ಮಂಗಳೂರು , ನಿಡ್ಪಳ್ಳಿ, ಮೂಡುಬಿದಿರೆ , ಬೆಳ್ತಂಗಡಿ, ಉಡುಪಿ  ಇತ್ಯಾದಿ  ಹಲವೆಡೆಗಳಲ್ಲಿ  ನಡೆದ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೂರಾರು ಕರಾಡ ಬಂಧುಗಳು ಮತ್ತು ಹಲವು ಹೊಸ ವಟುಗಳು ಪಾಲ್ಗೊಂಡು ಸಂಪ್ರದಾಯವನ್ನು ಉಳಿಸಿ ಬೆಳೆಸಿದರು.

ಪ್ರತಿ ಕೇಂದ್ರದಲ್ಲೂ ಹಿರಿಯ ಪುರೋಹಿತರ  ನೇತೃತ್ವದಲ್ಲಿ, ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ಹಾಗೂ ಭಕ್ತರ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.  ಈ ಮೂಲಕ, ಕರಾಡ ಸಮಾಜದ ಏಕತೆ, ಸಂಪ್ರದಾಯಪಾಲನೆ ಮತ್ತು ಭಕ್ತಿ ಭಾವ ಮತ್ತೆ ಒಗ್ಗೂಡಿದ ದೃಶ್ಯ ಕಂಡಿತು.

ಅಗಲ್ಪಾಡಿ ಮಠದಲ್ಲಿ ಸಾಮೂಹಿಕ ಋಗುಪಾಕರ್ಮ

ಪ್ರತಿವರ್ಷದಂತೆ, ಈ ವರ್ಷವೂ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಶ್ರಾವಣ ಶುಕ್ಲ ಪೂರ್ಣಿಮೆಯ ದಿನವಾದ ಇಂದು ಸಾಮೂಹಿಕ ಋಗುಪಾಕರ್ಮ ನೆರವೇರಿತು. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ, ಸುಮಾರು 30 ಹೊಸ ವಟುಗಳನ್ನು ಒಳಗೊಂಡಂತೆ ಒಟ್ಟು 75ರಷ್ಟು ಮಂದಿ ಭಾಗವಹಿಸಿದರು. ಸುಮಾರು ನೂರಕ್ಕೂ ಮಿಕ್ಕಿ ಕರಾಡ ಬಂಧುಗಳು ಆಗಮಿಸಿದ್ದರು.
ಕಾರ್ಯಕ್ರಮವನ್ನು ಕೂವೆಕಲ್ಲು ಸುಬ್ರಹ್ಮಣ್ಯ ಭಟ್, ಖಂಡೇರಿ ಅನಂತ ಭಟ್, ಮೂಲೆ ಶ್ರೀರಾಮ ಭಟ್ ಹಾಗೂ ಅಗಲ್ಪಾಡಿ ದೇವಸ್ಥಾನದ ತಂತ್ರಿರ್ಯರಾದ ಶಂಕರನಾರಾಯಣ ಭಟ್ ಗೋಸಾಡ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಮಧ್ಯಾಹ್ನ 12:30ಕ್ಕೆ ಕಾರ್ಯಕ್ರಮ ಸಮಾಪ್ತಿಯಾದ ಬಳಿಕ ಶ್ರೀ ದೇವರ ಪೂಜೆ, ಪ್ರಸಾದ ಭೋಜನ ನೆರವೇರಿತು. ನಂತರ ಎಲ್ಲರೂ  ಮನೆಗಳಿಗೆ ತೆರಳಿದರು.


ಚೇರ್ಕಬೆ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಋಗುಪಾಕರ್ಮ

ಶ್ರೀನಿವಾಸ ಪ್ರಸಾದ ನೆಲ್ಲಿಕುಂಜೆ, ಸಜಂಗದ್ದೆ ರಾಧಾಕೃಷ್ಣ ಭಟ್, ಹೊಸಮಾಧವ ಮಾಧವ ಭಟ್ ಮತ್ತು ನಾರಾಯಣ ಭಟ್ ಮೇಲಿನ ಶಿರಂತಡ್ಕ ಅವರ ನೇತೃತ್ವ ಹಾಗೂ ಉಪಸ್ಥಿತಿಯಲ್ಲಿ, ಚೇರ್ಕಬೆ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಋಗುಪಾಕರ್ಮ ಕಾರ್ಯಕ್ರಮ ನೆರವೇರಿತು. ಬೆಳಿಗ್ಗೆ 10:30ಕ್ಕೆ ಆರಂಭವಾದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 55ರಷ್ಟು  ಕರಾಡ ಬಂಧುಗಳು ಭಾಗವಹಿಸಿದ್ದು, ಇವರಲ್ಲಿ 6 ವಟುಗಳೂ ಸೇರಿದ್ದರು. ಕಾರ್ಯಕ್ರಮ ಭಕ್ತಿಪೂರ್ಣ ವಾತಾವರಣದಲ್ಲಿ ಯಶಸ್ವಿಯಾಗಿ ಮುಕ್ತಾಯವಾಯಿತು.


ಕರಾಡ ಬ್ರಾಹ್ಮಣ ಸಮಾಜ (ರಿ) ಬೆಂಗಳೂರು ನೇತೃತ್ವದಲ್ಲಿ  ಋಗುಪಾಕರ್ಮ:


೧ . ನಾಗರಬಾವಿಯ ಗಣಪತಿ ಭಟ್ ಕನಿಯಾಲಜಾಲು ಅವರ ಮನೆಯಲ್ಲಿ :

ಕರಾಡ ಬ್ರಾಹ್ಮಣ ಸಮಾಜ (ರಿ) ಬೆಂಗಳೂರು ಇದರ ನೇತೃತದಲ್ಲಿ ಇಂದು ಶ್ರಾವಣ ಶುಕ್ಲ ಪೂರ್ಣಿಮೆಯಂದು ಋಗುಪಾಕರ್ಮವು ಪ್ರಾತಃ ಕಾಲ ಸಮಾಜದ ಉಪಾಧ್ಯಕ್ಷ ಶ್ರೀ ಗಣಪತಿ ಭಟ್ ಅವರ ನಿವಾಸದಲ್ಲಿ ಜರುಗಿತು. 
ಕಳೆದ ಹಲವು ವರ್ಷಗಳಿಂದ ಪೌರೋಹಿತ್ಯ ವಹಿಸುತ್ತಿರುವ ಶ್ರೀ ಪ್ರಕಾಶ್ ಭಟ್ ಬೆಳ್ಳೆಚ್ಚಾಲು ಹಾಗೂ ಅಭಿಷೇಕ್ ಚೇರ್ಕುಡ್ಲು  ಇವರು ಪ್ರಾತಃ 6:30ಕ್ಕೆ ಸರಿಯಾಗಿ ಪ್ರಾರಂಭಿಸಿದರು. ಸುಮಾರು 50 ಬಂಧುಗಳು, 3 ನೂತನ ವಟುಗಳು ಭಾಗವಹಿಸಿದ್ದರು.
ಆಚಮನ , ಪ್ರಾಣಾಯಾಮ,ಭಸ್ಮಧಾರಣ ನಡೆಸಿದ ದ್ವಿಜರ ಮುಂದೆ ಗುರುಪೂಜೆ, ಪುಣ್ಯಾಹ, ಉತ್ಸರ್ಜನ ಹೋಮ ನಡೆಸಿ  ಶಾಸ್ತ್ರೋಕ್ತವಾಗಿ ಉಪಾಕರ್ಮ ಹೋಮವನ್ನೂ ನೆರವೇರಿಸಿದರು . ಶುದ್ಧ ಸ್ಪಷ್ಟ ಸ್ವರದಲ್ಲಿ ಉಪಾಕರ್ಮದ  ಮಹತ್ವವನ್ನೂ ತಿಳಿಸಿ ಸಮಾಜ ಬಂಧುಗಳಿಗೆ ಬ್ರಾಹ್ಮಣ್ಯದ ಅನುಷ್ಠಾನಕ್ಕೆ ಪ್ರೇರಣೆ ನೀಡಿದರು. 
ಯಶಸ್ವಿಯಾಗಿ ನಡೆದ ಸಮಾರಂಭದ ಉಸ್ತುವಾರಿಯನ್ನು ಗಣಪತಿ ಭಟ್ರ ಜೊತೆ ವೇಣುಗೋಪಾಲ ಭಟ್ ಕೆ ಎಂ ವಹಿಸಿದ್ದರು . ಉಪಾಕರ್ಮದ ನಂತರ ಉಪಹಾರದ ವ್ಯವಸ್ಥೆಯನ್ನೂ ಮಾಡಿದ್ದರು. ಸುಮಾರು 4 ಘಂಟೆಗಳ ಕಾಲ ನಡೆದ ಕಾರ್ಯಕ್ರಮ  ಬಂಧುಗಳಿಗೆ ಬ್ರಾಹ್ಮಣ್ಯದ ಬಗ್ಗೆ ಅರಿವುನೀಡಿತು.

 

೨ .  ಉಪ್ಪಂಗಳ/ ದೈತೋಟ, ಹೆಬ್ಬಾಳದಲ್ಲಿ

 ಇಂದು ಉಪ್ಪಂಗಳ/ ದೈತೋಟ, ಹೆಬ್ಬಾಳದಲ್ಲಿ ನಡೆದ ಉಪಾಕರ್ಮದಲ್ಲಿ ಒಟ್ಟು 23 ಮಂದಿ ಭಾಗವಹಿಸಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶ್ರೀ ಶಶಿಧರ ಭಟ್ ಪಾತನಡ್ಕ ಅವರಿಗೆ  ಕರಾಡ ಬ್ರಾಹ್ಮಣ ಸಮಾಜದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.


ಮೈಸೂರಿನಲ್ಲಿ ಋಗುಪಾಕರ್ಮ 

ಕರಾಡ ಬ್ರಾಹ್ಮಣ ಸಭಾ(ನೋ)ಮೈಸೂರು ಇದರ ನೇತೃತದಲ್ಲಿ ಇಂದು ಶ್ರಾವಣ ಶುಕ್ಲ ಪೂರ್ಣಿಮೆಯಂದು ಋಗುಪಾಕರ್ಮವು ಪ್ರಾತಃ ಕಾಲ 6.00 ಗಂಟೆಗೆ ಸಭಾದ ಕಾರ್ಯಾಲಯದಲ್ಲಿ ನಡೆಯಿತು. ಶ್ರೀಯುತ ವಿಘ್ನೇಶ ಭಟ್, ಸಜಂಕಿಲ ಅವರ ಪೌರೋಹಿತ್ಯದಲ್ಲಿ ನಡೆದ  ಉಪಾಕರ್ಮ ವಿಧಿಗಳು(ಗುರುಪೂಜೆ, ಪುಣ್ಯಾಹ, ಉತ್ಸರ್ಜನ ಹೋಮ ಇತ್ಯಾದಿ) ಶಾಸ್ತ್ರೋಕ್ತವಾಗಿ ನಡೆದು ಸಂಪನ್ನಗೊಂಡಿತು. 25  ಬಂಧುಗಳು ಭಾಗವಹಿಸಿದ್ದರು. ಉಪಾಕರ್ಮದ ನಂತರ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

 


ನಿಡ್ಪಳ್ಳಿ – ಪುತ್ತೂರು ವಲಯದ ಕರಾಡ ಬ್ರಾಹ್ಮಣ ಸೇವಾ ಸಮಿತಿ ನೇತೃತ್ವದಲ್ಲಿ 

ನಿಡ್ಪಳ್ಳಿ – ಪುತ್ತೂರು ವಲಯದ ಕರಾಡ ಬ್ರಾಹ್ಮಣ ಸೇವಾ ಸಮಿತಿ ಹಾಗೂ ಸೇವಾ ಟ್ರಸ್ಟ್ ಅವರ ನೇತೃತ್ವದಲ್ಲಿ, ಸಮಾಜದ ಕಟ್ಟಡ ‘ದುರ್ಗಾ ಗಣೇಶ ಸಭಾಭವನ’ದಲ್ಲಿ ಋಗುಪಾಕರ್ಮ ಕಾರ್ಯಕ್ರಮ ಭಕ್ತಿಪೂರ್ಣವಾಗಿ ನೆರವೇರಿತು.

ಪೈರುಪುಣಿ ವೆಂಕಟೇಶ ಭಟ್ಟರ, ಖಂಡೇರಿ ಬಾಲಕೃಷ್ಣ ಭಟ್ಟರ, ಪಂಜ ಗಣೇಶ ಭಟ್ಟರ ಹಾಗೂ ಮುಂಗಿಲ ವೆಂಕಟೇಶ ಭಟ್ಟರ ನೇತೃತ್ವದಲ್ಲಿ, ಸಂಘದ ಅಧ್ಯಕ್ಷರಾದ ಬೀರಮೂಲೆ ಕೃಷ್ಣ ಭಟ್ಟರ ಮತ್ತು ಕಾರ್ಯದರ್ಶಿ ರಾಮಕೃಷ್ಣ ಭಟ್ಟರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಒಟ್ಟು 50ರಷ್ಟು ಮಂದಿ, ಇದರಲ್ಲಿ 6 ವಟುಗಳೂ ಸೇರಿ, ಉತ್ಸಾಹದಿಂದ ಭಾಗವಹಿಸಿ ಧಾರ್ಮಿಕ ಕೃತ್ಯವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.

 


ಕರಾಡ ಸಮಾಜ ಬೆಳ್ತಂಗಡಿ

ಕರಾಡ ಸಮಾಜ ಬೆಳ್ತಂಗಡಿ ವಲಯದ ವತಿಯಿಂದ ಋಗುಪಾಕರ್ಮ ಕಾರ್ಯಕ್ರಮವು ಕರಾಡ ಸಮಾಜಭವನ ಇಲ್ಲಿ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಕೇಂದ್ರೀಯ ವಲಯದಿಂದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು ಮುಂದೆ ನಡೆಯುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸುವಂತೆ ವಿಷಯ ಪ್ರಸ್ತಾವಿಸಿದರು.
 ಸುವರ್ಣ ಮಹೋತ್ಸವ ಕಾರ್ಯಕ್ರಮದ ಯಶಸಿಗಾಗಿ ನಮ್ಮ ವಲಯದಿಂದ ಸಾಂಕೇತಿಕವಾಗಿ ಕಿರು ಕಾಣಿಕೆಯನ್ನು ಕೊಟ್ಟು ನಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಲಾಯಿತು.

 


ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ, ಗುಂಡ್ಯಡ್ಕ 

ಕ .ಬ್ರಾ. ಸ.ಸು. ಸಂಘ, ಗುಂಡ್ಯಡ್ಕ ಇದರ ಆಶ್ರಯದಲ್ಲಿ ದಿನಾಂಕ 09.08.2025 ನೇ ಶನಿವಾರದಂದು ಋಗುಪಾಕರ್ಮ  ಕಾರ್ಯಕ್ರಮವು ಗುಂಡ್ಯಡ್ಕದ " ರುಕ್ಮಿಣಿ ಪಾಂಡುರಂಗ ಸಭಾಭವನ"ದಲ್ಲಿ ನೆರವೇರಿತು ವೇದಮೂರ್ತಿ ಶ್ರೀ ಸುಬ್ರಮಣ್ಯ ಪರಾಡ್ಕರ್ ಎರ್ಫಲೆ ಇವರ ನೇತೃತ್ವದಲ್ಲಿ ಉಪಾಕರ್ಮದ ಕರ್ಮಾಂಗಗಳು ನಡೆದವು. ಶಾಸ್ತ್ರೋಕ್ತವಾಗಿ ಸಮಾಜ ಬಾಂಧವರೆಲ್ಲರಿಗೂ ಜನಿವಾರದಾರಣೆಯ ವಿಧಿ ವಿಧಾನಗಳನ್ನು ತಿಳಿಯಪಡಿಸಿದರು . ಐದು ಜನ  ವಟುಗಳಿಗೂ ನೂತನ ಉಪಾಕರ್ಮದ ಶಾಸ್ತ್ರ ನಡೆಯಿತು. ವೇದಮೂರ್ತಿ ಶ್ರೀ ಸುಧೀರ್ ದೇವ್ ಜಿ ಯವರು ಸಹಕರಿಸಿದರು. ಕ.ಬ್ರಾ .ಸ.ಸು. ಸಂಘದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಭಟ್ ನಾಟೇಕರ್, ಶ್ರೀ ಗಣಪತಿ ಭಟ್ ದೇವ್ ಜಿ , ಶ್ರೀ ರಮೇಶ್ ಭಟ್ ಪರಾಡ್ಕರ್ ಎರ್ಫಲೆ, ಶ್ರೀ ಪ್ರಭಾಕರ್ ಪರಾಡ್ಕರ್, ಶ್ರೀ ರಾಮ್ ಭಟ್ ಕೋಟೆ, ಶ್ರೀ ಕೆ. ಆರ್. ಪಂಡಿತ್ ಜಾಯಿಲೆ ಮುಂತಾದ ಸುಮಾರು 50 ಜನ ಸಮಾಜ ಬಾಂಧವರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಸಂಘದ ವತಿಯಿಂದ ಉಪಹಾರವನ್ನು ವ್ಯವಸ್ಥೆ ಗೊಳಿಸಲಾಗಿತ್ತು.


ಉಡುಪಿಯಲ್ಲಿ ಋಗುಪಾಕರ್ಮ 

ಇಂದು ಉಡುಪಿ ಸಂಘದ ವತಿಯಿಂದ ಯಶಸ್ವಿಯಾಗಿ ನಡೆಸಲ್ಪಟ್ಟ ಉಪಾಕರ್ಮ ಕಾರ್ಯಕ್ರಮವನ್ನು ಸಮಗ್ರ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಆದರಾತಿಥ್ಯಗಳೊಂದಿಗೆ  ಸಂಪೂರ್ಣವಾಗಿ ಪ್ರಾಯೋಜಿಸಿದ್ದಲ್ಲದೇ ಸಂಘಕ್ಕೆ ₹ 3000ದ ದೇಣಿಗೆಯನ್ನೂ ನೀಡಿ ನಮ್ಮನ್ನು ಪ್ರೋತ್ಸಾಹಿಸಿದ ಕುಂಡೇಲು ಸುರೇಶ್ ತಲ್ವಳ್ಕರ್ ಮತ್ತು ಅವರ ಕುಟುಂಬಿಕರೆಲ್ಲರಿಗೂ ಹಾಗೂ ಈ ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ಸತತವಾಗಿ ನೆರವೇರಿಸಿಕೊಂಡು ಸಹಕರಿಸುತ್ತಿರುವ ವೈದಿಕರಾದ ಶ್ರೀವತ್ಸ ಪರಾಡ್ಕರ್ ಕೇಮಾರು ಹಾಗೂ ಅವರಿಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡಿದ ಸಮಾಜದ ಸಹೃದಯಿ ಬಂಧುಗಳಿಗೆ ಹಾಗೂ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡ ಸರ್ವರಿಗೂ ಸಂಘದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಅಭಿವಂದನೆಗಳನ್ನು ಉಡುಪಿ ಕರಾಡ ಸಮಾಜದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ತಿಳಿಸಿರುತ್ತಾರೆ.  

 


ಮಂಗಳೂರು ಕರಾಡ ಭವನದಲ್ಲಿ ಋಗುಪಾಕರ್ಮ 

ಸುಮಾರು 35 ಕರಾಡ ಬಂಧುಗಳು ಪಾಲ್ಗೊಂಡಿದ್ದರು . 

 

 

Heritage
ವಿವಿಧೆಡೆಗಳಲ್ಲಿ ಸಾಮೂಹಿಕ ಋಗುಪಾಕರ್ಮ