
Article · June 12, 2026
ಚುಟುಕುಗಳು
✍️ ದಿವ್ಯಾ ಶಿರಂತಡ್ಕ
ತಿರುಗೇಟು
ಮೂದಲಿಸಿದರು ಪತಿ
ಉಪ್ಪಿಲ್ಲ ಸಾರಿಗೆ
ಕೋಪಿಸಿಕೊಂಡು ನೋಡಿದಳಾಕೆ
ಒಳ್ಳೆಯ ಬಣ್ಣವಿಲ್ಲ
ನೀವು ನಿನ್ನೆ ತಂದ ಸಾರಿಗೆ!
ಪಾಕ-ತೂಕ
ಯೂಟ್ಯೂಬ್ ನೋಡಿ ಮಾಡುವಳು
ಮನೆಯಾಕೆ, ವಿಧ ವಿಧ ಪಾಕ
ಅದ ತಿಂದು ಹೆಚ್ಚುತ್ತಲೇ ಇದೆ
ಮನೆಮಂದಿಯ ತೂಕ!
ಬದಲಾವಣೆ
ಹಿಂದಿನ ಮಕ್ಕಳಿಗೆ ತಿಳಿದಿತ್ತು ಅಳತೆ
ಮಿಲಿ ಗ್ರಾಂ, ಕಿಲೋ ಗ್ರಾಂ
ಇಂದಿನ ಮಕ್ಕಳನ್ನು ಆಳುತ್ತಿದೆ
ಟೆಲಿಗ್ರಾಂ ಇನ್ಸ್ಟಾಗ್ರಾಮ್!
Creative Writings
