News · August 27, 2026
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಋಗುಪಾಕರ್ಮ
ವರದಿ ಕೃಪೆ : ಶ್ರೀ ಅನಂತ ಭಟ್ ಚಾಂಗುಳಿ
ಅಗಲ್ಪಾಡಿಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಋಗ್ವೇದ ಉಪಾಕರ್ಮ ಕಾರ್ಯಕ್ರಮವು ಭಕ್ತಿಭಾವದಿಂದ ಹಾಗೂ ಸಾಂಗವಾಗಿ ನೆರವೇರಿತು.
ಕ್ಷೇತ್ರದ ತಂತ್ರಿವರ್ಯರಾದ ಶ್ರೀ ಶಂಕರ ನಾರಾಯಣ ಶರ್ಮ ಅವರ ನೇತೃತ್ವದಲ್ಲಿ ವಿಧಿವಿಧಾನಗಳು ನೆರವೇರಿದವು. ನೂತನ ವಟುಗಳು, ಅವರ ಹೆತ್ತವರು ಹಾಗೂ ಸಮಾಜ ಬಾಂಧವರು ಸೇರಿದಂತೆ ಒಟ್ಟು 35 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಧಾರ್ಮಿಕ ಶ್ರದ್ಧೆ ಹಾಗೂ ಸಮಾಜ ಬಾಂಧವರ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮತ್ತು ಅಚ್ಚುಕಟ್ಟಾಗಿ ಸಂಪನ್ನಗೊಂಡಿತು.
CommunityHeritage
