
News · September 14, 2026
ಬೆಳ್ತಂಗಡಿ ಕರಾಡ ಮಹಿಳಾ ವೇದಿಕೆ - ಸಾಮೂಹಿಕ ಹರಿತಾಲಿಕಾ ಪೂಜೆ
ವರದಿ - ಸುಜಾತ ಬೆಳ್ತಂಗಡಿ
ಕರಾಡ ಬ್ರಾಹ್ಮಣ ಸಮಾಜ ಬೆಳ್ತಂಗಡಿ ಹಾಗೂ ಕರಾಡ ಮಹಿಳಾ ವೇದಿಕೆ ಬೆಳ್ತಂಗಡಿ ತಾಲೂಕು ಇದರ ನೇತೃತ್ವದಲ್ಲಿ ಸೋಮಂತಡ್ಕದಲ್ಲಿರುವ ಸಮೃದ್ಧಿ ಕರಾಡ ಭವನದಲ್ಲಿ ಪ್ರತಿ ವರ್ಷದಂತೆ ಸಾಮೂಹಿಕವಾಗಿ ಹರಿತಾಲಿಕ ಪೂಜೆಯು ದಿನಾಂಕ 13/9/2026 ಭಾನುವಾರ ಯಶಸ್ವಿಯಾಗಿ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ವಿಜಯ ವಿ ಭಟ್ ಮಾತನಾಡಿ ಡಿಸೆಂಬರ್ ನಲ್ಲಿ ನಮ್ಮ ವಲಯದ ಆತಿಥ್ಯದಲ್ಲಿ ನಡೆಯಲಿರುವ ಕರಾಡ ಸುವರ್ಣ ಸಂಭ್ರಮದ ಒಂದು ದಿನದ ಕಾರ್ಯಕ್ರಮಕ್ಕೆ ಎಲ್ಲರ ಎಲ್ಲಾ ಸಹಕಾರ ಕೋರಿದರು. ಮಹಿಳಾ ವೇದಿಕೆ ಕಾರ್ಯದರ್ಶಿ ಶ್ರೀಮತಿ ಸುಜಾತ G ಭಟ್ ಸ್ವಾಗತಿಸಿದರು. ಮಹಿಳಾ ವೇದಿಕೆ ಸದಸ್ಯೆ ಶ್ರೀಮತಿ ಮಮತಾ V ಭಟ್ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.






Heritage
