Karada Vishwa

News · November 6, 2026

ಕರಾಡ ವಿಶ್ವ : ದೀಪಾವಳಿ ವಿಶೇಷ – 2026

ಬೆಳಕಿನ ಹಬ್ಬ, ಸಂಪ್ರದಾಯಗಳ ಸೊಬಗು....

ದೀಪಾವಳಿ ಎಂದರೆ ಕೇವಲ ದೀಪಗಳ ಹಬ್ಬವಲ್ಲ; ಅದು ನಮ್ಮ ಸಂಪ್ರದಾಯ, ಸಂಸ್ಕೃತಿ, ಕುಟುಂಬದ ಒಗ್ಗಟ್ಟು ಮತ್ತು ಸಂಭ್ರಮದ ಹಬ್ಬವೂ ಹೌದು. ಈ ದೀಪಾವಳಿಯನ್ನು ಕರಾಡ ವಿಶ್ವದೊಂದಿಗೆ ಇನ್ನಷ್ಟು ವಿಶೇಷವಾಗಿಸೋಣ. ಕರಾಡ ಬ್ರಾಹ್ಮಣರ ದೀಪಾವಳಿ ಆಚರಣೆಯ ವೈಶಿಷ್ಟ್ಯಗಳನ್ನು ದಾಖಲಿಸುವ ಹಾಗೂ ಎಲ್ಲರ ಸಂಭ್ರಮವನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಈ ಕೆಳಗಿನ ಚಟುವಟಿಕೆಗಳಲ್ಲಿ ಭಾಗವಹಿಸಲು ಎಲ್ಲ ಕರಾಡ ಬಾಂಧವರನ್ನು ಆಹ್ವಾನಿಸುತ್ತೇವೆ.


1. ನಮ್ಮ ಸಂಪ್ರದಾಯ – ನಿಮ್ಮ ಬರಹ

ಕರಾಡ ಬ್ರಾಹ್ಮಣರಲ್ಲಿ ದೀಪಾವಳಿಯ ಆಚರಣೆಯ ವಿಶೇಷ ಸಂಪ್ರದಾಯಗಳು, ಎಣ್ಣೆ ಸ್ನಾನ, ಹಂಡೆ ತುಂಬಿಸುವುದು, ಗೋಪೂಜೆ, ಬಲೀಂದ್ರ ಪೂಜೆ ಹಾಗೂ ಇತರ ಆಚರಣೆಗಳ ಕುರಿತು ತಿಳಿದಿರುವವರು ತಮ್ಮ ಅನುಭವ ಮತ್ತು ಮಾಹಿತಿಯನ್ನು ಲೇಖನದ ರೂಪದಲ್ಲಿ ಹಂಚಿಕೊಳ್ಳಬಹುದು.

ಲೇಖನಗಳನ್ನು ಸಲ್ಲಿಸಲು : Karada Vishwa App ನ Upload Your Articles ವಿಭಾಗದಲ್ಲಿ ಅಪ್‌ಲೋಡ್ ಮಾಡಿ ಅಥವಾ ಕರಾಡ ವಿಶ್ವ Helpline ಗೆ ಕಳುಹಿಸಿ.


2. ನಮ್ಮ ಮನೆಯ ದೀಪಾವಳಿ – ಚಿತ್ರಕವನ / ಬರಹ

ನಿಮ್ಮ ಮನೆಯ ದೀಪಾವಳಿ ಆಚರಣೆಯ ಒಂದು ಸುಂದರ ಛಾಯಾಚಿತ್ರದೊಂದಿಗೆ ಅದಕ್ಕೆ ಹೊಂದುವ ಚಿತ್ರಕವನ ಅಥವಾ ಪುಟ್ಟ ಬರಹವನ್ನು ಕಳುಹಿಸಿಕೊಡಿ.

ಕೊನೆಯ ದಿನಾಂಕ: ನವೆಂಬರ್ 10, ರಾತ್ರಿ 8 ಗಂಟೆಯೊಳಗೆ.

ಬರಹವನ್ನು ಸಲ್ಲಿಸಲು: Karada Vishwa App ನ Upload Your Articles ವಿಭಾಗದಲ್ಲಿ ಅಪ್‌ಲೋಡ್ ಮಾಡಿ ಅಥವಾ ಕರಾಡ ವಿಶ್ವ Helpline ಗೆ ಕಳುಹಿಸಿ.


3. ಪುಟಾಣಿಗಳ ಕೈಯಲ್ಲಿ ದೀಪಾವಳಿ ಶುಭಾಶಯ

ಮಕ್ಕಳು ಸ್ವತಃ ತಯಾರಿಸಿರುವ ದೀಪಾವಳಿ ಶುಭಾಶಯ ಪತ್ರಗಳ (Greeting Cards) ಸ್ಪಷ್ಟವಾದ ಚಿತ್ರಗಳನ್ನು ಕಳುಹಿಸಿಕೊಡಿ.

ಜೊತೆಗೆ ಈ ವಿವರಗಳನ್ನು ಕಡ್ಡಾಯವಾಗಿ ನಮೂದಿಸಿ:

- ಮಗುವಿನ ಹೆಸರು

- ವಯಸ್ಸು

- ಮನೆ ಹೆಸರು

- ಪೋಷಕರ ಸಂಪರ್ಕ ಸಂಖ್ಯೆ

ಕಳುಹಿಸಲು: ಕರಾಡ ವಿಶ್ವ Helpline

ಕೊನೆಯ ದಿನಾಂಕ: ನವೆಂಬರ್ 9, ರಾತ್ರಿ 8 ಗಂಟೆಯೊಳಗೆ.


4. ನಮ್ಮ ಮನೆಯ ದೀಪಾವಳಿ – Reel

ನಿಮ್ಮ ಮನೆಯ ದೀಪಾವಳಿ ಸಂಭ್ರಮವನ್ನು ಒಂದು ನಿಮಿಷದ ಸುಂದರ Reel ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Reel ಕಳುಹಿಸುವಾಗ ಗಮನಿಸಬೇಕಾದ ಅಂಶಗಳು:

- Reel ಅವಧಿ ಗರಿಷ್ಠ 1 ನಿಮಿಷ.

- ಮೊಬೈಲ್‌ನಲ್ಲಿ Vertical Mode (Portrait) ನಲ್ಲಿ ಚಿತ್ರೀಕರಿಸಿರಬೇಕು.

- Reel ಶೀರ್ಷಿಕೆ, ಕಳುಹಿಸುವವರ ಹೆಸರು, ಮನೆ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ನಮೂದಿಸಬೇಕು.

ಕಳುಹಿಸಲು: ಕರಾಡ ವಿಶ್ವ Helpline

ಕೊನೆಯ ದಿನಾಂಕ: ನವೆಂಬರ್ 10, ರಾತ್ರಿ 8 ಗಂಟೆಯೊಳಗೆ.


✨ ನಮ್ಮ ಸಂಪ್ರದಾಯ, ನಮ್ಮ ಸೃಜನಶೀಲತೆ, ನಮ್ಮ ಸಂಭ್ರಮ – ಎಲ್ಲವನ್ನೂ ಕರಾಡ ವಿಶ್ವದ ವೇದಿಕೆಯಲ್ಲಿ ಹಂಚಿಕೊಳ್ಳೋಣ. ಆಯ್ದ ಉತ್ತಮ ಕೃತಿಗಳನ್ನು ಮಾತ್ರ ಪ್ರಕಟಿಸುತ್ತೇವೆ . ಪ್ರಕಟಣೆಯಲ್ಲಿ ಸಂಪಾದಕ ಬಳಗದ ತೀರ್ಮಾನವೇ ಅಂತಿಮ .

ದೀಪಾವಳಿ ಹಬ್ಬದ ಶುಭಾಶಯಗಳೊಂದಿಗೆ...

-- ಕರಾಡ ವಿಶ್ವ ತಂಡ

ಸಂಪರ್ಕ • ಸಹಕಾರ • ಸಮೃದ್ಧಿ

(Karada Vishwa Helpline : +91 99804 67885)

Community