
Event · August 7, 2025
ಕರಾಡ ವಿಶ್ವ ವೆಬಿನಾರ್ ಸರಣಿ -28
ದಿನಾಂಕ : 09/08/2025ರ ಶನಿವಾರ ಸಂಜೆ 7.30ಕ್ಕೆ ವಿಷಯ : ಪ್ರಥಮ ಚಿಕಿತ್ಸೆ ಸಂಪನ್ಮೂಲ ವ್ಯಕ್ತಿ : ಡಾ. ಬೇಂಗ್ರೋಡಿ ರಾಮಚಂದ್ರ ಭಟ್
ಈ ಸರಣಿ ಕಾರ್ಯಕ್ರಮದ ಅಂಗವಾಗಿ 09/08/2025ರ ಶನಿವಾರ ಸಂಜೆ 7.30ಕ್ಕೆ ಪ್ರಥಮ ಚಿಕಿತ್ಸೆ ಎನ್ನುವ 'ಆರೋಗ್ಯ ವಿಷಯ'ದ ಕುರಿತು ಡಾ. ಬೇಂಗ್ರೋಡಿ ರಾಮಚಂದ್ರ ಭಟ್ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.
ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗೆ ಕೊಟ್ಟ ಲಿಂಕ್ ಮೂಲಕ ಕಾರ್ಯಕ್ರಮದ ದಿನದಂದು ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.
ಗೂಗಲ್ ಲಿಂಕ್: https://meet.google.com/jwo-yvyb-etc
ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ:
* ತಂದೆ ಬೇಂಗ್ರೋಡಿ ದಿ. ನಾರಾಯಣ ಭಟ್ಟರು, ತಾಯಿ ದಿ. ಕಾಶಮ್ಮನವರು.
* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹುಟ್ಟೂರು ಅಗಲ್ಪಾಡಿಯಲ್ಲಿ.
* B.Sc., M.B.B.S., DIH, DHA, F.W.C.D.P.G Diploma in Psy, Counseling ಪದವೀಧರರು.
* ಕೇರಳ ಸರಕಾರದ ಜಿಲ್ಲಾ ಸಹಾಯಕ ವೈದ್ಯಕೀಯ ಅಧಿಕಾರಿ ಮತ್ತು ಮಂಗಳೂರಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ.
* ಕುದುರೆಮುಖ ಕಬ್ಬಿಣ ಮತ್ತು ಅದಿರು ಕಾರ್ಖಾನೆಯ ಅಧೀನದ ಆಸ್ಪತ್ರೆಯಲ್ಲಿ 'ವೈದ್ಯಕೀಯ ಅಧೀಕ್ಷಕ'ರಾಗಿ 24 ವರ್ಷಗಳ ಕಾಲ ಸೇವೆ.
* ಏನಪೋಯಾ ಆಸ್ಪತ್ರೆಯ 'ಸಮುದಾಯ ಔಷಧಿ ವಿಭಾಗ'ದಲ್ಲಿ ನುರಿತ ವೈದ್ಯರಾಗಿ 9 ವರ್ಷ ಸೇವೆ.
* ಸಮಾಜದ ವಿವಿಧ ಸ್ತರಗಳ ಸಮುದಾಯ ಸೇವೆಯ 5000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಪ್ರಥಮ ಚಿಕಿತ್ಸೆ ಕುರಿತು ಕಾರ್ಯಾಗಾರ, ತರಬೇತಿ ನೀಡಿದ ಅನುಭವ.
* ಇನ್ಫೋಸಿಸ್, MRPL, NMPT, ರಿಲಯನ್ಸ್, ಇಂಡಿಯನ್ ಆಯಿಲ್ ಮುಂತಾದ ಸಂಸ್ಥೆಗಳು ಹಾಗೂ ಮಂಗಳೂರು ಪರಿಸರದ ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಅಂಗನವಾಡಿ ನೌಕರರನ್ನು ಸೇರಿಸಿ 2500ಕ್ಕೂ ಹೆಚ್ಚಿನ ಅಭ್ಯರ್ಥಿಗಳಿಗೆ ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ಮಾಹಿತಿ ಕುರಿತು ಕಾರ್ಯಾಗಾರ, ತರಬೇತಿ ನೀಡಿದ ಹೆಗ್ಗಳಿಕೆ.
* ಭಾರತೀಯ ವೈದ್ಯಕೀಯ ಸಂಸ್ಥೆಯ 'Doctor for Excel' ಪ್ರಶಸ್ತಿ, 'ವಿಜಯರತ್ನ' ಪ್ರಶಸ್ತಿ, 'Bharat Excellence' ಪ್ರಶಸ್ತಿ, 'ಜೀವಮಾನದ ಸಾಧಕ' ಪ್ರಶಸ್ತಿ... ಹೀಗೆ ಹಲವಾರು ಗೌರವಾದರಗಳು ಶ್ರೀಯುತರಿಗೆ ಸಂದಿವೆ.
* ಆರೋಗ್ಯ ಮತ್ತು ಪ್ರಥಮ ಚಿಕಿತ್ಸೆ ವಿಭಾಗ'ಗಳಲ್ಲಿ ಶ್ರೀಯುತರ ಹಲವಾರು ಸಂಶೋಧನಾ ಬರಹಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.
* ಆರೋಗ್ಯ ಜಾಗೃತಿ ಮತ್ತು ಮಾಹಿತಿ'ಯ ಕುರಿತು ಈಗಾಗಲೇ 137 ಕಾರ್ಯಾಗಾರ, ಉಪನ್ಯಾಸ ಮತ್ತು ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.
* ಮಂಗಳೂರು ನಿವಾಸಿ. ನೇರ ನಡೆ-ನುಡಿ, ಮಿತಭಾಷಿ.
ಸರಣಿಯ ಮುಂದಿನ ಕಂತು 13/09/2025 ರಂದು: ವಿವರಗಳು ಮುಂದೆ...
ಹಿಂದಿನ ಇಪ್ಪತ್ತೇಳು ಕಂತುಗಳ ಆಡಿಯೋಗಳು ಕೆಳಗಿನ ಲಿಂಕ್'ನಲ್ಲಿ ಲಭ್ಯವಿವೆ.
https://karadaplus.blogspot.com/p/karada-webinar.html
