
Article · October 10, 2026
ಶುಭಾಶಯ
By ಪಲ್ಲವಿ.ಪ್ರಶಾಂತ.ಕಾನೇಟ್ಕರ್.
ಪಲ್ಲವಿ ಪ್ರಶಾಂತ ಕಾನೇಟ್ಕರ್.
ಅಮ್ಮನ ಜನುಮ ದಿನದ ಸಂಭ್ರಮದಲ್ಲಿ ಮೂಡಿದ ಪುಟ್ಟ ಕವಿತೆ....
ಹೇ ಜನನಿ,ಜನ್ಮದಾತೆ
ನಿನಗಿದೋ ಪ್ರಣಾಮ.
ಬಸಿರ ಬಸಿದು, ಉಸಿರು ಕೊಟ್ಟೆ
ಪೂಜ್ಯ ನಿನ್ನ ನಾಮ.
ಬದುಕ ನನಗೆ ಮೀಸಲಿಟ್ಟ
ತ್ಯಾಗ ಮೂರ್ತಿ ನೀನು
ನಿನ್ನ ತಾಯಿಯಾಗಿ ಪಡೆದೆ
ಎಷ್ಟು ಧನ್ಯ ನಾನು.
ಗರ್ಭಗುಡಿಯು ನಿನ್ನ ಒಡಲು
ದೀಪ ನಿನ್ನ ಒಲವು
ಹಬ್ಬಕ್ಕಿಂತ ಮಿಗಿಲು ನನಗೆ
ನಿನ್ನ ಜನುಮ ದಿನವು...
(01/06/2020)
Creative Writings
