
Article · October 23, 2026
ಗೋಡೆ
By ದಿವ್ಯಾ ಶಿರಂತಡ್ಕ
ದಿವ್ಯಾ ಬಿ ಶಿರಂತಡ್ಕ
ಅಣ್ಣ ತಮ್ಮಂದಿರ ಮನೆ ಅಕ್ಕ ಪಕ್ಕವೇ. ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬಂತೆ ಅವರದೇ ಆದ ಸಂಸಾರ ಬೆಳೆದಂತೆ ಅವರ ಮಧ್ಯೆ ವೈಮನಸ್ಸಿನ ಗೋಡೆ ಏರುತ್ತಲೇ ಇತ್ತು. ಆಸ್ತಿಯೂ ಪಕ್ಕಾ ಪಾಲಾದ ಮೇಲೆ ಅವರ ಮನೆಯ ಮಧ್ಯೆಯೂ ಆಚೆ ಈಚೆ ಕಾಣದಷ್ಟು ದೊಡ್ಡ ಗೋಡೆ ಎದ್ದೇ ಬಿಟ್ಟಿತ್ತು. ಹೇಗೂ ಪರಸ್ಪರ ಕಾಣುವ, ಮಾತನಾಡುವ ಪ್ರಮೇಯವೇ ಇಲ್ಲವಲ್ಲ. ಅದೊಂದು ದಿನ ಅಣ್ಣ ಪೇಟೆಯತ್ತ ತೆರಳಿದ್ದರು. ಹೆಂಡತಿ ಹೂವಿನ ಗಿಡಗಳಿಗೆ ನೀರುಣಿಸುತ್ತಿದ್ದಾಗ ಥಟ್ಟನೆ ಕಾಣಿಸಿದ ಎದೆ ನೋವು ಕ್ಷಣಾರ್ಧದಲ್ಲಿ ಅವರನ್ನು ನೆಲಕ್ಕೆ ಕೆಡವಿತ್ತು. ಎಷ್ಟು ಹೊತ್ತು ನರಳಿದ್ದರೋ, ದೇವರೇ ಬಲ್ಲ! ತಾಸು ಕಳೆದು ಗಂಡ ಮನೆಗೆ ಬಂದಾಗ ಪ್ರಾಣ ಪಕ್ಷಿಯೇ ಹಾರಿಹೋಗಿತ್ತು. ಗೋಡೆ ನಿರ್ವಿಕಾರ ಭಾವ ತಳೆದು ಹಾಗೆಯೇ ನಿಂತಿತ್ತು...
Creative Writings
