
Article · December 23, 2025
ವಿಜಯಮಾಲೆ
ಕವಯಿತ್ರಿ : ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
ಕಾನಕಾಜೆಯ ನಯನ ಗೆದ್ದು ಬಂದರು ನೋಡಿ,
ತಾವರೆಯ ಚಿಹ್ನೆ ಇಹ ಪಕ್ಷದಿಂದ
ಪಕ್ಷಾಭಿಮಾನಿಗಳು ಗೆಲ್ಲಿಸಿದರಿವರನ್ನು
ತುಂಬು ಹೃದಯದಿ ಇತ್ತ ಮತಗಳಿಂದ
ಕೇರಳದ ರಾಜ್ಯದಲಿಬಿ.ಜೆ.ಪಿ.ಗಿಲ್ಲಬೆಲೆ,
ಗೆಲುವು ಕಷ್ಟವೆ ಇರುವ ಸಮಯದಲ್ಲಿ
"ರೂಪವಾಣಿ "ಯ ನೆರವು ಪಡೆದು ಗೆದ್ದರು ಇವರು,
ಗೆಲುವಿಗಬ್ಬರವಿಲ್ಲ"ಸೌಮ್ಯ" ದಲ್ಲಿ !
ಇಷ್ಟು ದಿನದವಮಾನ, ಸೋಲು, ನಿರಾಸೆಗಳು
ಮೂಲೆಗುಂಪಾಗಿಹವು ಗೆಲುವಿನಲ್ಲಿ
ಸಿಕ್ಕಿರುವ ಗೆಲುವಿದೋ ಭಾರತಾಂಬೆಯ ಪದಕೆ,
ಅರ್ಪಣೆಯು ತಿರುವನಂತಪುರಂನಲ್ಲಿ
ಈಗಿರುವ ಈ ಗೆಲುವು ನಾಂದಿಯಾಗಲಿ ಮುಂದೆ,
ಪ್ರತಿ ಚುನಾವಣೆಯನ್ನು ಗೆಲ್ಲುವಲ್ಲಿ
'ಸುಬ್ರಹ್ಮಣ್ಯ'ನ ಕರುಣೆ ಪಕ್ಷಕ್ಕೆ ಇರಲೆಂದು,
ಕೇಳಿಕೊಳ್ಳುವ ಸ್ವಾಮಿ ಸ್ಕಂದನಲ್ಲಿ !
ಗೆಲುವು ಶಾಶ್ವತವಾಗಿ ಆವರಿಸಿಕೊಳ್ಳಲೀ
ಸಂಪೂರ್ಣ ಕೇರಳವ ಗೆಲ್ಲುವಲ್ಲಿ
ಎಂದಿಗೂ ಕೈತಪ್ಪಿ ಹೋಗದಿರಲೀ ವಿಜಯ
ಮಾಲೆ ವಿಜೃಂಭಿಸಲಿ ಕೊರಳಿನಲ್ಲಿ !
Creative Writings
