
Article · August 21, 2026
ಮದವೂರಿನ ಕ್ಷೇತ್ರದಿ ನೆಲೆಸಿಹ
By ರಾಧಾಕೃಷ್ಣ ಭಟ್ ಕುರುಮುಜ್ಜಿ
ರಾಧಾಕೃಷ್ಣ ಭಟ್ ಕುರುಮುಜ್ಜಿ
ಕುಟಚಾದ್ರಿಯಿಲ್... ಮಲಯಾಳ ಭಕ್ತಿಗೀತೆಯ ಧಾಟಿಯಲ್ಲಿ ರಚಿಸಿದ ಮಧೂರು ಗಣಪತಿಯ ಭಕ್ತಿಗೀತೆ
ಮದವೂರಿನ ಕ್ಷೇತ್ರದಿ ನೆಲೆಸಿಹ
ಗಣನಾಯಕ ಸರ್ವಶುಭದಾಯಕ
ಕಾತರ ಹೃದಯವು ಕಾಣಲು
ಬಯಸಿದೆ ನಿನ್ನ ದರುಶನವ
ಮಂಗಳ ಮಂದಸ್ಮಿತವನು ತೋರೋ ||ಮದವೂರಿನ||
ಗಣನಾಯಕ---ಆ -ಆ-ಆ-ಆ-ದೇವಶುಭದಾಯಕ
ಗಣನಾಯಕದೇವ ಶುಭದಾಯಕ
ಆದಿವಂದಿತದೇವ ಸಿದ್ಧಿವಿನಾಯಕ ಬುದ್ಧಿಪ್ರದಾಯಕ
ಬಿರುದಾಂಕಿತ ನೀನು ನಮ್ಮ ಮಧುಪುರ ಗಣನಾಥನು
||ಮದವೂರಿನ||
ವಿದ್ಯಾಪ್ರದಾಯಕ ವರದಾಯಕ ಶಿವಗಿರಿಜಾಸುತ ಗಣಪಾ
ಮಾಡಿದ ಪಾಪವ ತೊಳೆಯಲು ಬರುವೆವು
ಮಧುವಾಹಿನಿಯಲ್ಲಿ ನಿನ್ನ ಪುಣ್ಯಕ್ಷೇತ್ರದಲಿ ||ಮದವೂರಿನ||
Creative Writings
