Karada Vishwa

Article · August 28, 2026

ಇರಲಿ ಆಶೀರ್ವಾದ.

By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಗುರು ಗಣಪತಿಯೆ ನಿನಗೆ
ಗೌರವದ ವಂದನೆಯು,
ಗರಿಕೆಯನು ಅರ್ಪಿಸುತಲಿರುವೇ../

ಗಣನಾಯಕಾ ನಿನಗೆ
ಎಳ್ಳುಂಡಳಿಕ ಕಬ್ಬು
ಭಕ್ತಿಯಲಿ ನಾ ನೀಡುತಿರುವೇ /

ದೇವ ಜಗದೀಶನೇ

ಮದವೂರ ವಿಘ್ನೇಶ
ಮೋದಕದ ಅರ್ಪಣೆಯು ನಿನಗೆ /

ಕಬ್ಬಿನಾ ಹೊರೆಯನ್ನೆ

ತಂದು ನಿನಗರ್ಪಿಸುವೆ,

ಬಾರಯ್ಯ ಗಣಪತಿಯೆ ಧರೆಗೇ /

ಭಾದ್ರಪದ ಶುಕ್ಲದಾ
ಚೌತಿಯಾ ದಿನದಂದು

ಶುಭ ಮುಹೂರ್ತದಲಿ ಬಾ ಮನೆಗೇ /

ಒಬ್ಬನೇ ಬರಬೇಡ
ಹೆತ್ತವರ ಕರೆದು ತಾ
ಸಿಗಲಿ ಆಶೀರ್ವಾದ ನಮಗೇ /

Creative Writings