
News · June 24, 2026
ಅಸಹಾಯಕ ವಿದ್ಯಾರ್ಥಿಗಳಿಗೆ ಕಲಿಕಾ ಸಹಾಯ
- ಕರಾಡ ಸಹಾಯಕ ಬಂಧು
ಬಂಧುಗಳೇ,
ಅಸಹಾಯಕ ಸಮಾಜ ಬಾಂಧವರಿಗೆ ಸಹಾಯ ಮಾಡೋಣ, ಸ್ವಾವಲಂಬಿ ಸಮಾಜಕ್ಕೆ ಮಾದರಿಯಾಗೋಣ.
ಕರಾಡ ಸಹಾಯಕ ಬಂಧುವಿನ ಸಾಮಾಜಿಕ ಚಟುವಟಿಕೆಗಳಿಗೆ ಪೂರಕವಾಗಿ ಸಮಾಜದ ಅಸಹಾಯಕ ವಿದ್ಯಾರ್ಥಿಗಳಿಗೆ ಕಲಿಕಾ ಸಹಾಯ ಯೋಜನೆಯ ಅಡಿಯಲ್ಲಿ 2026 -27ನೇ ಶೈಕ್ಷಣಿಕ ವರ್ಷದ ವಿದ್ಯಾನಿಧಿ (ಯೋಜನಾಮೊತ್ತ 9,36,630 ರೂ )ಸಂಗ್ರಹದ ಮೂರನೇ ದಿನವಾದ ಇಂದಿಗೆ ಇನ್ನು ಸುಮಾರು ಒಂದುವರೆ ಲಕ್ಷಗಳಷ್ಟು ನಿಧಿ ಸಂಗ್ರಹಣೆ ಬಾಕಿ ಇದೆ. ಒಂದಷ್ಟು ವಿದ್ಯಾರ್ಥಿಗಳಿಗೆ ತಮ್ಮಇಡೀ ಕೋರ್ಸ್ ಗಳಿಗೆ sponsorship ಸಿಕ್ಕಿರುತ್ತದೆ. ಇನ್ನು ಕೇವಲ ಮೂರು ವಿದ್ಯಾರ್ಥಿಗಳು ಈ ವಿಷಯದಲ್ಲಿ ಬಾಕಿ ಉಳಿದಿದ್ದಾರೆ. ಇವರಿಗೆ ವಾರ್ಷಿಕವಾಗಿ ಅಥವಾ ಅವರ ಇಡೀ ಕೊರ್ಸ್ ಮುಗಿಯುವ ತನಕ partial sponsorship ಗೂ ಅವಕಾಶವಿದೆ. ಆಸಕ್ತಿ ಇರುವವರು ದಯಮಾಡಿ ನಮ್ಮ ಟ್ರಸ್ಟನ್ನು ಸಂಪರ್ಕಿಸಬಹುದು.
Karada Sahayaka Bandhu Charitable Trust - 7994390395.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಕರಿಸುವ ಸಮಾಜ ಬಂಧುಗಳು, ಸಂಬಂಧಪಟ್ಟ ಸಂಘ ಸಂಸ್ಥೆಗಳು( ತಮ್ಮದೇ ಆದ ರೀತಿರಿವಾಜುಗಳು ಇವೆ, ಈ ಕಾರಣದಿಂದ ವಾಗ್ದಾನಕ್ಕೆ ಅವಕಾಶವಿದೆ ) ನಾಳೆ ನೋಡೋಣ ಅಥವಾ ಇನ್ನೊಬ್ಬ ಕೊಡಲಿ ಮತ್ತೆ ನೋಡೋಣ ಎಂಬ ಮನೋಭಾವವನ್ನು ಬಿಟ್ಟು ಶುಭಸ್ಯ ಶೀಘ್ರಮ್ ಎಂಬ ನಾಣ್ಣುಡಿಯಂತೆ ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪರವಾಗಿ ಕೇಳಿಕೊಳ್ಳುತ್ತಿದ್ದೇವೆ 🙏🏼.
ಕರಾಡ ಸಹಾಯಕ ಬಂಧು
