Karada Vishwa

Article · October 26, 2026

ಬ್ರಹ್ಮ ಮುಹೂರ್ತವು ಶುಭ ಸಮಯ

By ಜಯಶ್ರೀ ಕೆ . ಆರ್ ಭಟ್. ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

ಪ್ರಾತಃಕಾಲದ ಬ್ರಹ್ಮ ಮುಹೂರ್ತವು
ಯೋಗಕೆ,ಧ್ಯಾನಕೆ ಶುಭ ಸಮಯ /

ಕೇಶವ ಅಚ್ಚುತಹರಿ ನಾರಾಯಣ
ಲೋಕದಿ ಸಂಚರಿಸುವ ಸಮಯ /

ಕಣ್ಣಿಗೆ ಕಾಣದೆ ಅನುಭವ ಮಾತ್ರದಿ
ಹೃದಯವನು ತುಂಬುವ ವಿಷಯ /

ಕಂಗಳ ಮುಚ್ಚಿ ಧ್ಯಾನವ ಮಾಡಲು
ಹೃದಯದೊಳಗೆ ಸೇರಿಯೆ ಬಿಡುವ /

ಏನೇ ಇರಲಿ ಹೇಗೆ ಬರಲಿ
ತುಂಬಲಿ ನಮ್ಮೊಳು ಸಹೃದಯ /

ಪ್ರಾತಃ ಕಾಲದ ಬ್ರಹ್ಮ ಮುಹೂರ್ತವು
ದೇವರು ಓಡಾಡುವ ಸಮಯ /

ಶಿರವನು ಬಾಗಿಸಿ ಕರಗಳ ಮುಗಿದು
ದೇವಗೆ ಶರಣಾಗುವ ಸಮಯ /

ಬ್ರಹ್ಮ ಮುಹೂರ್ತಕೆ ಗಾಳಿಯ ಕಣಕಣ
ಶಕ್ತಿಯ ತುಂಬಿರುವ ಸಮಯ /

ಹೃನ್ಮನದೊಳಗಡೆ ದೈವೀ ಶಕ್ತಿಯು
ಸಂಚರಿಸುತ ಬೆರೆಯುವ ಸಮಯ /

ಪ್ರಾತಃಕಾಲದ ಬ್ರಹ್ಮ ಮುಹೂರ್ತದಿ

ದೇವರ ಧ್ಯಾನವು ಶುಭ ವಿಷಯ /

ಗೆಲ್ಲಲು ಬಹುದು ಅರಿಷಡ್ವರ್ಗವ

ಸೋಲಬಹುದು ಇಂದ್ರಿಯ ವಿಷಯ /

ನಿತ್ಯವು ದೇವರ ಧ್ಯಾನವ ಮಾಡಲು

ಮನದಲಿತುಂಬುವ ಸದ್ವಿಶಯ /

ಭೇದವ ಮಾಡದೆ ಎಲ್ಲರ ಮುಂದೆ

ವೈಕುಂಠವನೇ ಸೇರಿಸುವ /

ಮುಕ್ತಿಯ ನೀಡುವ ಹರಿಸರ್ವೋತ್ತಮ

ಮೋಕ್ಷದ ದಾರಿಯ ತೋರಿಸುವ /


Creative Writings