Karada Vishwa

News · September 18, 2026

ಅಂಬಿಕಾ ರಾಜೇಂದ್ರ ಕೆದುಕೋಡಿ ಅವರಿಗೆ ಗಣಿತಶಾಸ್ತ್ರದಲ್ಲಿ PhD

ಕರಾಡ ವಿಶ್ವದ ಹಾರ್ದಿಕ ಅಭಿನಂದನೆಗಳು

ಕಾಸರಗೋಡು ಜಿಲ್ಲೆಯ ಮವ್ವಾರಿನ ಮುಂಡೋಳಿ ದಿವಂಗತ ನಾರಾಯಣ ಶರ್ಮ ಹಾಗೂ ದಿವಂಗತ ಶಶಿಕಲಾ ದಂಪತಿಯ ಪುತ್ರಿ, ಪ್ರಸ್ತುತ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ (NMAMIT), ನಿಟ್ಟೆ, ಇಲ್ಲಿನ ಗಣಿತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಅಂಬಿಕಾ ಎನ್. ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯಿಂದ Ph.D. ಪದವಿ ಪಡೆದಿರುವುದು ಹೆಮ್ಮೆಯ ಸಂಗತಿ.

ಎ.ಜೆ. ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಹಾಗೂ ವಿಭಾಗ ಮುಖ್ಯಸ್ಥೆಯಾಗಿದ್ದ ಡಾ. ಶಾಂತಾ ಕುಮಾರಿ ಕೆ. ಅವರ ಮಾರ್ಗದರ್ಶನದಲ್ಲಿ “Contributions to the Theory of Generalized Hypergeometric Function with Their Applications” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಮಂಡಿಸಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಅವರು ಸಾಧಿಸಿರುವ ಈ ಮಹತ್ವದ ಮೈಲಿಗಲ್ಲು ಕರಾಡ ಸಮಾಜಕ್ಕೆ ಹೆಮ್ಮೆಯ ವಿಷಯ.

ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ರಾಜೇಂದ್ರ ರಾವ್ ಕೆ. ಅವರ ಧರ್ಮಪತ್ನಿಯಾಗಿರುವ ಡಾ. ಅಂಬಿಕಾ ಎನ್. ಅವರಿಗೆ ಈ ಶೈಕ್ಷಣಿಕ ಸಾಧನೆಗಾಗಿ ಕರಾಡ ವಿಶ್ವದ ಹೃತ್ಪೂರ್ವಕ ಅಭಿನಂದನೆಗಳು.

ಅವರ ಮುಂದಿನ ಶೈಕ್ಷಣಿಕ ಹಾಗೂ ಸಂಶೋಧನಾ ಪಯಣ ಇನ್ನಷ್ಟು ಯಶಸ್ವಿಯಾಗಲಿ, ಅನೇಕ ಹೊಸ ಸಾಧನೆಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸುತ್ತೇವೆ.

AchieversWomenEducation
ಅಂಬಿಕಾ ರಾಜೇಂದ್ರ ಕೆದುಕೋಡಿ ಅವರಿಗೆ ಗಣಿತಶಾಸ್ತ್ರದಲ್ಲಿ PhD