Karada Vishwa

Article · June 10, 2026

ಚುಟುಕುಗಳು

✍️ದಿವ್ಯಾ ಶಿರಂತಡ್ಕ

ಅಂದು- ಇಂದು 

ಅಂದು ಭಾಷಣ ಮಾಡಿ ಕಿವಿ ಕೊರೆಯುವವರಿದ್ದರು
ಸದಾ  ಬೇಕಿತ್ತು ಕೈಯಲ್ಲಿ ಹತ್ತಿ

ಈಗೇನಿದ್ದರೂ ಗೂಗಲ್ ಮೀಟ್ ಭಾಷಣ 
ನಿದ್ದೆ ಹೋಗಬಹುದು ವೀಡಿಯೋ ಮ್ಯೂಟ್ ಒತ್ತಿ!

ಪ್ರಿಯತಮನ ದುಃಖ 


ಪ್ರಿಯೇ... ಅದ್ಭುತ ನಿನ್ನ ರೂಪ
ಬೇರೆಲ್ಲೂ ಕಾಣುವುದು ಅಪರೂಪ

ತೊಂಡೆ ತುಟಿ, ಸಂಪಿಗೆ ಮೂಗು
ಹಾಲ್ಬೆಳಕಿನಂತೆ  ನಿನ್ನ ನಗು..

ಕಮಲದ ಎಸಳುಗಳು ಆ ನಿನ್ನ ಅಕ್ಷಿ
ಆದರೆ  ಎಂದಿಗೂ ಸಿಗದ ಹುಳಿ ದ್ರಾಕ್ಷಿ!

ಸಾರಿ 

ಪ್ರಿಯೇ ನೀ ಅದೆಷ್ಟು ಬಾರಿ ತಪ್ಪು ಮಾಡಿದರೂ 
ಕೇಳಬೇಡ ಇಂಗ್ಲಿಷಿನಲ್ಲಿ ಸಾರಿ..

ಪದೇ ಪದೇ ನೆನಪು ಬಂದು ತಲೆ ತಿರುಗುತ್ತಿದೆ
ಆಗಾಗ ನೀ ಖರೀದಿಸುವ ಸಾರಿ!!!
     
Creative Writings
ಚುಟುಕುಗಳು