
Article · March 17, 2026
ಗ್ಯಾಸ್ ಪಂಚಕ (ಚುಟುಕುಗಳು)
- ರಾಧಾಕೃಷ್ಣ ಭಟ್ ಕುರುಮುಜ್ಜಿ
೧-ಪರಿಹಾರ
ಸತಿ ಕೇಳಿದಳು ತನ್ನ ಪತಿಯಲ್ಲಿ
ಮಾಡುವುದೇನ್ರೀ ಗ್ಯಾಸ್ ಸಿಗದಿದ್ರೆ?
ಪತಿ ನಗುತ್ತಾ ನುಡಿದ ಶ್ರೀಮತಿಯಲ್ಲಿ
ಹೋದರಾಯಿತು ಎಲ್ಲಾದ್ರೂ ಜಂಬರವಿದ್ರೆ
೨-ಕ್ಯೂ ಆರ್ ಯಸ್ ಟೀ
ಗ್ಯಾಸ್ ಸಿಗಲು ಜನರ ಸಾಲು-ಕ್ಯೂ
ಸಿಗದಿರಲುಮನೆಗೆ ರಿಟರ್ನ್- ಆರ್
ಗ್ಯಾಸ್ ಸಮಸ್ಯೆಯ ವಾಸ್ತವ-ಯಸ್
ಸಿಗದಿದ್ದರೆ ಚಿಂತೆ ಹೇಗೆ ಮಾಡಲಿ-ಟೀ?
೩-ಅಂದು---ಇಂದು
ಕೆಲವು ವರ್ಷಗಳ ಹಿಂದಿನ ದುಸ್ಥಿತಿ
ಹೆಚ್ಚಾಗಿ ಕೊರೋನಾ ವಿಶ್ವದೆಲ್ಲೆಡೆ
ಅದೇ ರೀತಿ ಆಗಿದೆ ಇಂದಿನ ಪರಿಸ್ಥಿತಿ
ಯುದ್ಧದಿಂದಾಗಿ ಸಿಗದೆ ಗ್ಯಾಸ್ ಅಂಡೆ
೪-ಅನಿವಾರ್ಯ
ಕೆಲವೆಡೆ ಕಟ್ಟಿಗೆಯ ಒಲೆ
ಸೇರಿಹುದು ಎಲ್ಲೋ ಮೂಲೆ
ಈಗ ಹೆಚ್ಚಿದೆ ಪ್ರೀತಿ ಅದರ ಮೇಲೆ
ಸ್ವಾಗತಿಸುತ್ತಾರೆ ಹಾಕಿ ಮಾಲೆ
೫-ಗ್ಯಾಸ್ ಮುಗಿದಾಗ
ಮುಖತೊಳೆದು ದೇವರಿಗೆ ಕೈಮುಗಿಯಬೇಕು
ಎಂದುಯೋಚಿಸುವಾಗ ಅವಳ ಉದಯರಾಗ
ಮನದ ಅನಿಸಿಕೆ ಬಹುಷಃ ಗ್ಯಾಸ್ ಮುಗಿದಿರಬೇಕು?
ವಾಸ್ತವವಿದು ಕೆಲವೊಮ್ಮೆ ಹೋಗಿ ನೋಡುವಾಗ
Creative Writings
