Karada Vishwa

News · August 31, 2026

ಪ್ರದೀಪ್ ಕುಮಾರ್ ಕೊಮ್ಮುಂಜೆ ಇವರಿಗೆ ಅತ್ಯುತ್ತಮ ಅರೋಗ್ಯ ಸೇವಾ ವೃತ್ತಿಪರ ಪ್ರಶಸ್ತಿ

ಕರಾಡ ವಿಶ್ವದ ಹಾರ್ದಿಕ ಅಭಿನಂದನೆಗಳು...

ಪ್ರದೀಪ್ ಕುಮಾರ್ ಕೊಮ್ಮುಂಜೆ ಅವರು ಸುವರ್ಣ ಭಾರತ್ ಫೌಂಡೇಶನ್‌ನ “Outstanding Healthcare Professional Award”ಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ. ಗುಣಮಟ್ಟದ ಆರೋಗ್ಯ ಸೇವೆ, NABH ಮಾನದಂಡಗಳ ಅನುಷ್ಠಾನ, ರೋಗಿ ಸುರಕ್ಷತೆ, ರೋಗಿ ಕೇಂದ್ರಿತ ಆರೈಕೆ ಹಾಗೂ International Patient Safety Goals (IPSG)ಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನೀಡಿದ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಸುರಕ್ಷಿತ, ಪರಿಣಾಮಕಾರಿ ಹಾಗೂ ಮಾನವೀಯ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ತೋರಿದ ನಾಯಕತ್ವ, ಬದ್ಧತೆ ಮತ್ತು ನಿರಂತರ ಗುಣಮಟ್ಟ ಸುಧಾರಣೆಯ ಪ್ರಯತ್ನಗಳಿಗೆ ಈ ಗೌರವ ಸಂದಿದೆ. ಗುಣಮಟ್ಟ ಮತ್ತು ರೋಗಿ ಸುರಕ್ಷತೆಯತ್ತ ಅವರ ಸಮರ್ಪಿತ ಸೇವೆಗೆ ಈ ಪ್ರಶಸ್ತಿ ಮತ್ತಷ್ಟು ಪ್ರೇರಣೆಯಾಗಲಿ ಎಂಬುದು ಹಾರೈಕೆ.

ಪ್ರದೀಪ್ ಕುಮಾರ್ ಕೆ ಇವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಕ್ವಾಲಿಟಿ ಮೆನೇಜರ್ ಮತ್ತು ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೋಮಾ ಮತ್ತು ಹೆಲ್ತ್ ಕೇರ್ ಮ್ಯಾನೇಜ್ಮೆಂಟ್ ನಲ್ಲಿ ಎಂಬಿಎ ಪದವಿ ಪಡೆದಿರುತ್ತಾರೆ . ಇವರ ತಂದೆಯ ಹೆಸರು ಸೂರ್ಯನಾರಾಯಣ ಭಟ್ ತಾಯಿ ಮನೋರಮ . ಮಡದಿ ಸ್ವಾತಿ ಮುತ್ತು ಮಗಳು ಪ್ರಸ್ತುತಿ . ವೈದ್ಯಕೀಯ ಕ್ಷೇತ್ರದಲ್ಲಿ 24 ವರ್ಷಗಳ ಅನುಭವವಿರುವ ಇವರು ಪಡೆದದ್ದು Most iconic Quality Leader Award, Bharat Ratna Iconic Excellence Award, Accountable Leadership Award -Johnson&Johson, Outstanding Healthcare Professional Award, Global Recognition Award . ಹೆಲ್ತ್ ಕೇರ್ ಗ್ಲೋಬಲ್(HCG ), Johson&JOHNSON , ಶಂಕರ ಕ್ಯಾನ್ಸರ್ ಆಸ್ಪತ್ರೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇವರು ಕಾರ್ಯನಿರ್ವಹಿಸಿರುತ್ತಾರೆ . ಅನೇಕ ಆಸ್ಪತ್ರೆಗಳಿಗೆ NABH ಮತ್ತು ಇತರ ಗುಣಮಟ್ಟದ ಪ್ರಮಾಣ ಪತ್ರ ಪಡೆಯಲು ತರಬೇತಿ ನೀಡಿರುತ್ತಾರೆ. ಅನೇಕ ಆಸ್ಪತ್ರೆಯ ರೂಪರೇಷೆಗಳನ್ನು ಮಾಡಲು ಸಹಕರಿಸಿರುತ್ತಾರೆ. ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದು ಮತ್ತು ಭಕ್ತಿಗೀತೆಗಳನ್ನು ಬರೆಯುವುದು ಮತ್ತು ಹಾಡುವುದು ಇವರ ಹವ್ಯಾಸಗಳು. ನಮ್ಮದೇ ರಚನೆಯ ನಾಲ್ಕು ಹಾಡುಗಳನ್ನು ಹಾಡಿ ಅದಕ್ಕೆ ಸಂಗೀತವನ್ನು ನೀಡಿರುತ್ತಾರೆ. ಇವರು ಕೊಮ್ಮುಂಜೆ ಮನೆತನದವರಾಗಿರುತ್ತಾರೆ

Achievers
ಪ್ರದೀಪ್ ಕುಮಾರ್ ಕೊಮ್ಮುಂಜೆ ಇವರಿಗೆ ಅತ್ಯುತ್ತಮ ಅರೋಗ್ಯ ಸೇವಾ ವೃತ್ತಿಪರ ಪ್ರಶಸ್ತಿ