
Article · October 12, 2026
ಶ್ರೀ ಅಗಲ್ಪಾಡಿಪುರ ದುರ್ಗಾಪರಮೇಶ್ವರಿ (ಅನ್ನಪೂರ್ಣೇಶ್ವರಿ) ಕೀರ್ತನಮ್
By ಗಾಯತ್ರಿ ನಾಗರಾಜ
ಗಾಯತ್ರಿ ಕೆ ಅಡ್ಕತೊಟ್ಟಿ
ದೇವಿ ದೇವಿ ದೇವಿ ದುರ್ಗೇ ಅಂಬಾ ದೇವಿ ಪಾಹಿ,
ಅಗಲಪಾಡಿಪುರ ನಿಲಯೇ ಶ್ರೀದೇವಿ ಪಾಹಿ ||
ದುರ್ಗಾ ಪರಮೇಶ್ವರಿ ದಯಾನಿಧೇ ಪಾಹಿ,
ದುರ್ಗತಿ ನಾಶಿನಿ ಸದಾಶಿವೇ ಪಾಹಿ ||
ಅನ್ನಪೂರ್ಣೇಶ್ವರಿ ಅನುರೂಪಿಣಿ ಪಾಹಿ,
ಅಕ್ಷಯದಾಯಿನಿ ಅನುಪಮೇ ಪಾಹಿ ||
ಜನಗಣ ವರದಾಯಿನಿ ಜಗನ್ಮಾತೇ ಪಾಹಿ,
ಕರುಣಾಮಯಿ ಕಲ್ಯಾಣಿ ಫಲದಾಯಿನಿ ಪಾಹಿ ||
ಶಂಖ ಚಕ್ರ ಶೂಲ ಪದ್ಮ ಧಾರಿಣಿ ಪಾಹಿ,
ಶುಭದಾಯಿನಿ ಶಾಂಭವಿ ಸರ್ವಾಣಿ ಪಾಹಿ ||
ಪಾಪ ವಿನಾಶಿನಿ ಪುಣ್ಯಪ್ರದೇ ಪಾಹಿ,
ದೀನ ಜನಾವನ ಸುರಕ್ಷಿತೇ ಪಾಹಿ ||
ಅಗಲಪಾಡಿಪುರ ನಿಲಯೇ ಅನ್ನದಾಯಿನಿ ಪಾಹಿ,
ಕರಾಡ ಕುಲ ಪಾಲಿನಿ ಕರುಣಾ ನಿಧೇ ಪಾಹಿ॥
Creative Writings
