Karada Vishwa

Event · November 18, 2026

ಕರಾಡ ವಿಶ್ವ ವೆಬಿನಾರ್ ಸರಣಿ -42

ದಿನಾಂಕ : 21/11/2026ರ ಶನಿವಾರ ಸಮಯ: ಸಂಜೆ 7.30ಕ್ಕೆ ವಿಷಯ : Bone marrow transplant ಸಂಪನ್ಮೂಲ ವ್ಯಕ್ತಿ: ಡಾ. ವಿಜಯ‌ ರಮಣನ್ ಮಠದಮೂಲೆ

ಈ ಸರಣಿ ಕಾರ್ಯಕ್ರಮದ ಅಂಗವಾಗಿ 21/11/2026ರ ಶನಿವಾರ ಸಂಜೆ 7.30ಕ್ಕೆ Bone marrow transplant ಎನ್ನುವ ವಿಷಯದ ಕುರಿತು‌‌ ಪುಣೆಯಲ್ಲಿ ನೆಲೆಸಿರುವ ಡಾ. ವಿಜಯ‌ ರಮಣನ್ ಮಠದಮೂಲೆ ಮಾತನಾಡಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರ ಇರಲಿದೆ.

ಇದು ಗೂಗಲ್ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ. ಬನ್ನಿ! ಕೆಳಗಿನ ಲಿಂಕ್ ಮೂಲಕ ಕಾರ್ಯಕ್ರಮದ ದಿನ ವೀಡಿಯೋ ಮತ್ತು ಆಡಿಯೋ off ಮಾಡಿ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಿ.

ಗೂಗಲ್ ಲಿಂಕ್:

https://meet.google.com/qnv-yigz-wsi

ಸಂಪನ್ಮೂಲ ವ್ಯಕ್ತಿಯ ಕಿರು ಮಾಹಿತಿ:

★ ಪರಿಚಯ: ತಂದೆ ದಿ. ಸುಬ್ರಹ್ಮಣ್ಯನ್, ತಾಯಿ ಶ್ರೀಮತಿ ಯಶೋದಾ. ಡಾ. ವಿಜಯ್ ರಮಣನ್ ಅವರು ಭಾರತದ ನುರಿತ ಕ್ಲಿನಿಕಲ್ ಹೆಮಟಾಲಜಿಸ್ಟ್ ಮತ್ತು ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ತಜ್ಞರಲ್ಲೊಬ್ಬರು.

★ ವಿದ್ಯಾರ್ಹತೆ: ಇವರು ಎಂಬಿಬಿಎಸ್, ಎಂಡಿ ಜನರಲ್ ಮೆಡಿಸಿನ್ ಹಾಗೂ ಡಿಎಂ ಕ್ಲಿನಿಕಲ್ ಹೆಮಟಾಲಜಿ ಪದವಿಗಳನ್ನು ಪಡೆದಿದ್ದಾರೆ.

★ ವೃತ್ತಿ ಅನುಭವ: ಕ್ಲಿನಿಕಲ್ ಹೆಮಟಾಲಜಿ ಮತ್ತು ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಕ್ಷೇತ್ರದಲ್ಲಿ ಸುಮಾರು 24 ವರ್ಷಗಳ ವೃತ್ತಿಪರ ಅನುಭವವನ್ನು ಹೊಂದಿದ್ದಾರೆ. ಪುಣೆಯ ರೂಬಿ ಹಾಲ್ ಕ್ಲಿನಿಕ್‌ನಲ್ಲಿ ಬೋನ್ ಮ್ಯಾರೋ ಮತ್ತು ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್ ವಿಭಾಗದ ಮುಖ್ಯಸ್ಥರಾಗಿ ಹಾಗೂ ಸಂಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

★ ಚಿಕಿತ್ಸಾ ಸಾಧನೆಗಳು, ಸಂಶೋಧನೆ ಮತ್ತು ಪ್ರಕಟಣೆಗಳು: ಇದುವರೆಗೆ 370ಕ್ಕೂ ಹೆಚ್ಚು ಬೋನ್ ಮ್ಯಾರೋ ಕಸಿಗಳನ್ನು ಮತ್ತು ಥೆಲಸೆಮಿಯಾ, ಲ್ಯುಕೇಮಿಯಾ, ಮೈಲೋಮಾದಂತಹ ಕಾಯಿಲೆಗಳಿಂದ ಬಳಲುತ್ತಿರುವ 15,000ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳ ಕುರಿತು ಹಲವು ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದು, ರಾಷ್ಟ್ರೀಯ ಮಟ್ಟದ ಪಠ್ಯಪುಸ್ತಕಗಳಿಗೆ ಅಧ್ಯಾಯಗಳನ್ನು ಬರೆದಿದ್ದಾರೆ.

★ ಪ್ರಶಸ್ತಿಗಳು ಮತ್ತು ಸಾಮಾಜಿಕ ಸೇವೆ: ಇವರಿಗೆ ಮಹಾರಾಷ್ಟ್ರದ ಅತ್ಯುತ್ತಮ ಹೆಮಟಾಲಜಿಸ್ಟ್ ಪ್ರಶಸ್ತಿ ಹಾಗೂ 'ನ್ಯಾಷನಲ್ ಕ್ವಾಲಿಟಿ ಎಕ್ಸಲೆನ್ಸ್ ಅವಾರ್ಡ್ (2017)' ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಎಂ.ವಿ.ಆರ್. ವೆಲ್ಫೇರ್ ಫೌಂಡೇಶನ್ ಮೂಲಕ ಬಡ ರೋಗಿಗಳಿಗೆ ರಿಯಾಯಿತಿ ದರದಲ್ಲಿ ವೈದ್ಯಕೀಯ ತನಿಖೆಗಳು ಮತ್ತು ಸಹಾಯವನ್ನು ಒದಗಿಸುತ್ತಿದ್ದಾರೆ. ಪಶ್ಚಿಮ ಭಾರತದಲ್ಲಿ ಥೆಲಸೆಮಿಯಾ ರೋಗಿಗಳಿಗಾಗಿ ಪ್ರಥಮ ಹಗಲಿನ ಆರೈಕೆ (ಡೇ ಕೇರ್) ಕೇಂದ್ರವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ಬಡವರಿಗೆ ಮತ್ತು ಬುಡಕಟ್ಟು ಜನರಿಗೆ ರಕ್ತ ಪೂರೈಕೆ, ಆಂಬುಲೆನ್ಸ್ ಸೇವೆ ಹಾಗೂ ಆಹಾರ ಧಾನ್ಯಗಳನ್ನು ಒದಗಿಸುವ ಮೂಲಕ ಮಾನವೀಯ ಕಾರ್ಯಗಳನ್ನು ಮಾಡಿದ್ದರು.

★ ಶ್ರೀಯುತರು ಪುಣೆಯಲ್ಲಿ ತಮ್ಮ ತಾಯಿಯ ಹೆಸರಿನ ಯಶೋದಾ ಹೆಮಟಾಲಜಿ ಕ್ಲಿನಿಕ್‌ ನ ಮುಖ್ಯಸ್ಥರು ಮತ್ತು ಅಲ್ಲಿ ತಮ್ಮ ವೃತ್ತಿ ಸೇವೆ ಸಲ್ಲಿಸುತ್ತಿದ್ದಾರೆ.

Webinar