Karada Vishwa

Article · September 16, 2026

ದೇವರ ನಾಡು - ಕಾಸರಗೋಡು

By ಜಯರಾಮ ಶಿರಂತಡ್ಕ

ಜಯರಾಂ ಶಿರಂತಡ್ಕ, ಮಸ್ಕತ್

ಕಾಸರಗೋಡಿನ ಸುಪ್ರಸಿದ್ಧ ದೇವಾಲಯಗಳ ಪ್ರೇರಣೆಯಿಂದ ಸುಮಾರು 5 ವರ್ಷಕ್ಕೂ ಮೊದಲು ರಚಿಸಿದ ಒಂದು ಗೀತೆ.

ಮಧವೂರು ಗಜಮುಖ..
ಅಡೂರು ವಿನಾಯಕ..
ತೃಕ್ಕನ್ನಾಡು ತ್ರಯಂಬಕ..
ಸುಬ್ರಾಯ ಕಾಟುಕುಕ್ಕ ,
ಗಡಿನಾಡ ಕಾಯುವರಿವ ದೇವ ದೈವರ ನಾಕ,
ಇಲ್ಲಿ ಹುಟ್ಟಿ ಬೆಳೆಯಲಿಕ್ಕ ಪುಣ್ಯಾ ಮಾಡಿರಬೇಕಾ. II2II ಮಧವೂರುII


II1II
ಕಣಿಪುರ ಗಿರಿಧರ..
ಸ್ವಾಮಿ ಅನಂತಪುರ..
ಅನಂತ ಮಂಜೇಶ್ವರ..
ಮುತ್ತಪ್ಪ ಮಾಡಪ್ಪುರ,
ಮುಗಿಯಲು ಜನುಮಾಂತರ ಮಾಡಿದ ಪಾಪದ ಭಾರ,
ಪಾರ್ಥಸಾರಥಿ ಕೆರೆ, ಬಿಡಿಸು ನೀ ಭವದ ಸೆರೆ. II2IIಮಧವೂರುII


II2II
ಕೊರಕೊಡು ಕಾತ್ಯಾಯಿನಿ..
ಚೀರುಂಬ ಭಗವತಿ..
ಮಲ್ಲದ ದುರ್ಗಾದೇವಿ..
ಗೋಸಾಡ ಮಹಿಷಿ ತಾಯಿ..
ದಕ್ಷಿಣ ಶಬರಿಮಲೆ ಉಬ್ರಂಗಳ ಮಾದೇವನ ನೆಲೆ,
ಹದಿನೆಂಟು ಮೆಟ್ಟಿಲನೇರಿ ಕಳೆ ನೀ ಪಾಪದ ಕೊಳೆ. II2IIಮಧವೂರುII


II3II
ಕಾನತ್ತೂರ್ ಶ್ರೀ ನಾಲ್ವರು..
ಮಹಾವಿಷ್ಣು ಬೆಳ್ಳೂರು..
ಪೆರಡಾಲ ಉದನೇಶ..
ಕಾಸರಗೋಡು ಮಲ್ಲೀಕೇಶ..
ಅಗಲ್ಪಾಡಿ ತಾಯಿ ನಮ್ಮ ಪೊರೆವ ಈ ಪುಣ್ಯ ನೆಲ,
ಪಡ್ರೆ ದೈವದ ನೆಲೆ, ಚೇರ್ಕಬೆ ಮುರುಗಗೆ ಭಲೇ II2IIಮಧವೂರುII

Creative Writings